(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಪೇದೆಯೊಬ್ಬರಿಂದ ಮೋಸ ಹೋದೆನೆಂದು ದೂರು ಕೊಡಲು ಹೋದರೂ ಸ್ವೀಕರಿಸುತ್ತಿಲ್ಲ ಎಂದು ತಿಂಗಳ ಕಾಲ ಎಲ್ಲ ಠಾಣೆಗಳಿಗೂ ಸುತ್ತಾಡಿ ಕಡೆಗೆ ಮಾಧ್ಯಮ ಗೋಷ್ಠಿ ಕರೆಯುತ್ತಿದ್ದಂತೆ ಇನ್ಸ್ ಪೆಕ್ಟರ್ ಎಫ್ ಐ ಆರ್ ದಾಖಲಿಸಿದ್ದಾರೆ.
ಸಂತ್ರಸ್ಥ ಮಹಿಳೆ ರಾಮಸಮುದ್ರ ಪೂರ್ವ ಠಾಣೆ, ಮಹಿಳಾ ಠಾಣೆ ಡಿವೈಸ್ಪಿ ಕಛೇರಿಗೆ ತಿಂಗಳು ಕಾಲ ಅಲೆದರೂ ವಿಚಾರಣೆ ಇರಲಿ ದೂರು ಕೂಡ ದಾಖಲಿಸದೆ ಇಡೀ ಇಲಾಖೆ ಪೇದೆ ಪರವಾಗಿ ನಿಂತಿದೆ ಎಂದು ಅಳಲು ತೋಡಿಕೊಂಡಿದ್ದರು.
ಎಸ್ಪಿ ಅವರು ಮಹಿಳಾ ಠಾಣೆ ಸಂಪರ್ಕಿಸುವಂತೆ ಸಂತ್ರಸ್ಥೆಗೆ ಸೂಚಿಸಿದ್ದರು.
ಇದುವರೆಗೂ ದೂರು ದಾಖಲಿಸದ ಇನ್ಸ್ ಪೆಕ್ಟರ್ ಶೇಷಾದ್ರಿ ಅವರು ಮೌನವಾಗಿದ್ದರು. ಇಡೀ ಠಾಣೆಯ ಸಿಬ್ಬಂದಿ ಪೇದೆ ಪರವಾಗಿ ಪರೋಕ್ಷ ಬೆಂಬಲಕ್ಕೆ ನಿಂತಿದ್ದರು.
ಇತ್ತ ಪೇದೆ ರಾಮಸಮುದ್ರ ಪೂರ್ವ ಠಾಣೆ ಇನ್ಸ್ ಪೆಕ್ಟರ್ ಶ್ರೀಕಾಂತ್ ಅವರು ತಮ್ಮ ಹಿರಿಯ ಅದಧಿಕಾರಿ ಡಿವೈಎಸ್‌ಪಿ ಅಥವಾ ಎಸ್ಪಿ ಅವರಿಗಾಗಲಿ ಗಮನಕ್ಕೆ ತರಬಹುದಿತ್ತು. ಆದರೆ ಅವರೂ ಕೂಡ ಈ ಪ್ರಯತ್ನ ಮಾಡಲಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಸಂತ್ರಸ್ಥೆ ಡಿವೈಸ್ಪಿ ಬಳಿ ಹೋದರೂ ಅವರು ಕೂಡ ನೊಂದವರ ನೋವು ಆಲಿಸೋದಿರಲಿ ಬ್ಯುಸಿಯಾಗಿದ್ದಂತೆ ತೋರಿದರು.
ಈ ನಡುವೆ ಸಂತ್ರಸ್ತೆ ಮನನೊಂದು ಕೊನೆಗೂ ಮಾಧ್ಯಮ ಗೋಷ್ಟಿ ಕರೆದಿದ್ದಾರೆ. ಈ ಸುದ್ದಿ ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಅವರಿಗೆ ತಿಳಿಯುತ್ತಿದ್ದಂತೆ ದೂರು ದಾಖಲಿಸ್ತೇವೆ ಬನ್ನಿ ಎಂಬ ಉತ್ತರ ಕೂಡ ನೀಡಿದ್ದಾರೆ.
ಹಾಗಾದರೆ ನೊಂದವರು, ಸಂತ್ರಸ್ಥರು ಮಧ್ಯಮ ಗೋಷ್ಟಿ ನಡೆಸಿದರೆ ಮಾತ್ರ ದೂರು ದಾಖಲಿಸೋದಾ ಎಂಬ ಅನುಮಾನ ಮೂಡಿಸುತ್ತಿದೆ.
ಮಾಧ್ಯಮ ಗೋಷ್ಟಿ ನಡೆಸಿದ ನಂತರ ಸಂತ್ರಸ್ಥೆ ಮಹಿಳಾ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ಪಡೆದ ಇನ್ಸ್ ಪೆಕ್ಟರ್ ಪೇದೆ ಅಶೋಕ್, ಅವರ ಸಂಬಂದಧಿಕರಾದ ಪ್ರೇಮ್ ಕುಮಾರ್ , ನಂದ್ ಕುಮಾರ್ ಸೇರಿ ಮೂವರ ವಿರುದ್ದ ಈಗ ಎಫ್.ಐ.ಆರ್ ದಾಖಲಿಸಿದ್ದಾರೆ.
ಒಟ್ಟಾರೆ ಠಾಣೆಯ ಕೆಲ ಸಿಬ್ಬಂದಿಗಳ ಮೇಲೆ ಲೈಂಗಿಕ , ಮಹಿಳಾ ಶೋಷಣೆ ಆರೋಪಗಳೆ ಹೆಚ್ಚೆಚ್ಚು ಕೇಳಿ ಬರುತ್ತಿದೆ.ಎಸ್ಪಿ ,ಡಿವೈಸ್ಪಿ ಮಹಿಳೆಯರೆ ಆಗಿದ್ದರೂ ನ್ಯಾಯ ಕೊಡಿಸುವಲ್ಲಿ ವಿಫಲರಾಗಿರೊದರ ಜೊತೆಗೆ ಶಿಸ್ತಿನ ಇಲಾಖೆಯಲ್ಲೂ ಅತಿ ಹೆಚ್ಚಿನ ಅಶಿಸ್ತು ಮೂಡಿಬರುತ್ತಿರೋದು ವಿಪರ್ಯಾಸವಾಗಿದೆ.