ನಾಯಿ ದಾಳಿಗೆ ಕುರಿ, ಮೇಕೆ ಸಾವು

ಮೈಸೂರು: ನಾಯಿ ದಾಳಿ ಮಾಡಿ ಮೇಕೆ ಕುರಿ ಗಳನ್ನು ಸಾಯಿಸಿರುವ ಘಟನೆ ಮೈಸೂರಿನ ವೀಣೆ ಶೇಷಣ್ಣ ರಸ್ತೆಯಲ್ಲಿ ನಡೆದಿದೆ.

ನಾಯಿ ದಾಳಿಗೆ ಮೂರು ಕುರಿ ಒಂದು ಮೇಕೆ ಸಾವನ್ನಪ್ಪಿವೆ.

ಮುದಾಸಿರ್ ಎಂಬುವರು ತಮ್ಮ ಕುರಿ ಮೇಕೆಗಳನ್ನು ಖಾಲಿ ನಿವೇಶನದಲ್ಲಿ ಕಟ್ಟಿ ಹಾಕಿದ್ದರು.

ಅದು ಯಾವಾಗಲೋ ನಾಯಿಗಳು ದಾಳಿ ನಡೆಸಿವೆ.ಕುರಿ ಮೇಕೆಗಳ ಆಕ್ರಂದನ ಕೇಳಿ ಬಂದು ನೋಡುವಷ್ಟರಲ್ಲಿ ಮೂರು ಕುರಿ,ಒಂದು ಮೇಕೆ ಮೃತಪಟ್ಟಿದ್ದವು.

ಸ್ಥಳಕ್ಕೆ 51ನೇ ವಾರ್ಡ್ ಕಾರ್ಪೋರೇಟರ್ ಬಿ ವಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಡಾವಣೆಯಲ್ಲಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕುವ ಭರವಸೆಯನ್ನು ಮಂಜುನಾಥ್ ನೀಡಿದ್ದಾರೆ.