ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೈವೇ ಚಾಲನೆಗೊಂಡು ಐದಾರು ತಿಂಗಳಾಗಿದ್ದು, ಜನರ ಸುಲಿಗೆ ಮಾಡುವ ವ್ಯವಸ್ಥೆಯನ್ನ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಬೆಂಗಳೂರಿಗೆ ಹೋಗಲು ಎರಡೆರಡು ಬಾರಿ ಟೋಲ್ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.
ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಡೆ 330 ಇನ್ನೊಂದು ಕಡೆ 330 ರೂ. ಪಾವತಿಸಬೇಕಿದೆ. ಇದು ಜನರ ಸುಲುಗೆ ಅಲ್ಲದೆ ಬೇರೇನು ಅಲ್ಲ.
ಎಂದು ಹೇಳಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಾಲ್ಕು ಪಥದ ರಸ್ತೆ ಮಾಡಲಾಗಿತ್ತು, ಉಚಿತವಾಗಿ ಸಂಚಾರ ಮಾಡುಬಹುದಿತ್ತು. ಈಗ ದಶಪಥ ರಸ್ತೆ ಮಾಡಿ ಜನರ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು.
ಆರಂಭದಲ್ಲಿ 3 ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾದ ಈ ರಸ್ತೆ ಕಾಮಗಾರಿ ನಂತರ ಸುಮಾರು 12 ಸಾವಿರ ಕೋಟಿ ವೆಚ್ಚವಾಗಿದೆ ಎಂದು ಹೇಳುತ್ತಿದ್ದಾರೆ.
ಒಟ್ಟು118 ಕಿ.ಮೀಗಳಲ್ಲಿ ಕಿ ಮೀ ಗೆ 4 ರೂ ಟೋಲ್ ನಿಗದಿ ಮಾಡಿದ್ದಾರೆ. ಬೇರೆ ಹೆದ್ದಾರಿಗಳಲ್ಲಿ ಕೇವಲ 1.48 ಪೈಸೆ ನಿಗದಿಯಾಗಿದೆ.
ಒಂದು ದಿನಕ್ಕೆ ಒಂದು ಲಕ್ಷ ವಾಹನಗಳು ಸಂಚಾರ ಮಾಡುತ್ತವೆ ಎಂಬ ಅಂದಾಜು ಇದೆ. ಒಂದು ದಿನಕ್ಕೆ ಸುಮಾರು10 ಕೋಟಿ ಕಲೆಕ್ಷನ್ ಆಗುತ್ತದೆ. ಇದೇ ರೀತಿ 30 ವರ್ಷ ಟೋಲ್ ಸಂಗ್ರಕ್ಕೆ ಅನುಮತಿ ಕೊಟ್ಟಿದ್ದಾರೆ.
30 ವರ್ಷಕ್ಕೆ ಎಷ್ಟು ಕೋಟಿ ಆಗುತ್ತೆ? ಈ ಮೂಲಕ ಸಾವಿರಾರು ಕೋಟಿ ಹಗಲು ದರೊಡೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಮೂಲಕ ರಸ್ತೆ ದರೋಡೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿ ಜನರನ್ನ ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಮೈಸೂರು ಬೆಂಗಳೂರು ದಶಪಥ ರಸ್ತೆ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಟೋಲ್ ನಿಂದ ಕಲೆಕ್ಷನ್ ಆಗುತ್ತಿರುವುದು ದಿನಕ್ಕೆ 10 ಕೋಟಿ, ಸರ್ಕಾರಕ್ಕೆ ಇವರು ಕಟ್ಟುತ್ತಿರುವುದು ಕೇವಲ 59 ಲಕ್ಷ.
ಅಂದರೆ ಉಳಿದ ಹಣ ರಸ್ತೆ ನಿರ್ಮಾಣ ಮಾಡಿದವರ ಕೈ ಸೇರುತ್ತಿದೆ. ಇದರಲ್ಲಿ ಎಷ್ಟು ಹಣ ಪ್ರತಾಪ್ ಸಿಂಹ ಅವರ ಕೈ ಸೇರುತ್ತಿದೆ ಹೇಳಬೇಕು ಎಂದು ಎಂ.ಲಕ್ಷ್ಮಣ್ ಒತ್ತಾಯಿಸಿದರು.