ದೇವನೂರು ಶ್ರೀ ಮಠದ ಶ್ರೀ ಶಿವಪ್ಪ ಸ್ವಾಮೀಜಿ ಆತ್ಮಹತ್ಯೆ

ಮೈಸೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸ್ವಾಮೀಜಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ದೇವನೂರು ಶ್ರೀ ಮಠದಲ್ಲಿ ನಡೆದಿದೆ.

ದೇವನೂರು ಶ್ರೀ ಮಠದ ಶ್ರೀ ಶಿವಪ್ಪ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀಗಳು.

ದೇವನೂರು ಶ್ರೀ ಗುರು ಮಲ್ಲೇಶ್ವರ ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮಿಗಳವರ ಶಿಷ್ಯ ರಾಗಿದ್ದ ಶ್ರೀ ಶಿವಪ್ಪ ಸ್ವಾಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ 40 ವರ್ಷಗಳಿಂದ ಶ್ರೀಮಠದಲ್ಲಿ ಒಣ ಭಿಕ್ಷೆ, ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಬಾನಹಳ್ಳಿ ಶ್ರೀ ಶಿವಪ್ಪ ಸ್ವಾಮಿಗಳು, ತಮ್ಮ ಕಾಯಕದಿಂದ ಶ್ರೀ ಮಠದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು.

ಈ ಮೂಲಕ ಶಿವಪ್ಪ ದೇವರು ಎಂದು ಖ್ಯಾತಿ ಪಡೆದಿದ್ದರು.

ಇತ್ತೀಚೆಗೆ ಕಿವಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಖಿನ್ನತೆಗೆ ಒಳಗಾಗಿ ಕಳೆದ ಕೆಲವು ದಿನಗಳಿಂದ ಮಠದಿಂದ ಕಾಣೆಯಾಗಿದ್ದರು.

ಟಿ ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಶವ ಪತ್ತೆಯಾಗಿದೆ.

ಶ್ರೀ ಮಠದ ಮಠಾಧ್ಯಕ್ಷರಾದ ಮಹಾಂತ ಸ್ವಾಮಿಗಳು ಸೇರಿದಂತೆ ದೇವನೂರಿನ ಪ್ರಮುಖರು ಹಾಗು ಮಠದ ಭಕ್ತರು ಶ್ರೀಗಳ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.