ಚಾಮರಾಜನಗರ ಜಿಲ್ಲಾದಿಕಾರಿಯಾಗಿ ಶಿಲ್ಪನಾಗ್ ಅದಿಕಾರ ಸ್ವೀಕಾರ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚಾಮರಾಜನಗರವು ಜಿಲ್ಲಾದಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಉತ್ತಮ ವಾತಾವರಣ ಇರುವ ಜಿಲ್ಲೆಯಾಗಿದೆ ಎಂದು ನೂತನ ಜಿಲ್ಲಾದಿಕಾರಿ ಸಿ.ಟಿ.ಶಿಲ್ಪನಾಗ್  ಅವರು ಹೇಳಿದರು.

ಇಲ್ಲಿ ಕೆಲಸ ನಿರ್ವಹಣೆ ಮಾಡಲು ಸಂತೋಷವಾಗುತ್ತದೆ ಎಂದು ಖುಷಿ ವ್ಯಕ್ತಪಡಿಸಿದರು.

ಚಾಮರಾಜನಗರ ಜಿಲ್ಲಾಡಳಿತಭವನದಲ್ಲಿರುವ ತಮ್ಮ ಕಛೇರಿಯಲ್ಲಿ ಜಿ.ಪಂ. ಸಿಇಒ ಪೂವಿತ ಅವರಿಂದ ಅದಿಕಾರ ಸ್ವೀಕರಿಸಿ ನಂತರ ಮಾದ್ಯಮದವರೊಂದಿಗೆ ಶಿಲ್ಪಾ ಮಾತನಾಡಿದರು.

ಎಸಿ,ಕಾರ್ಫೊರೆಷನ್ ಕಮಿಷನರ್, ಆರ್ ಡಿ ಪಿ ಆರ್ ಕಮಿಷನರ್ ಆಗಿ ಬೇರೆ ಬೇರೆ ಕಡೆ ಕೆಲಸ ನಿರ್ವಹಿಸಲಾಗಿದೆ‌.

ಚಾಮರಾಜನಗರ ನೈಸರ್ಗಿಕ ಸುಂದರ ವಾತಾವರಣವುಳ್ಳ ಜಿಲ್ಲೆಯಾಗಿದೆ,ಇಲ್ಲಿ ಕೆಲಸ ಮಾಡಲು ಸಂತೋಷವಾಗುತ್ತಿದೆ ಎಂದು ತಿಳಿಸಿದರು.

ಈಗಷ್ಟೆ ಅದಿಕಾರ ವಹಿಸಿಕೊಂಡಿದ್ದೇನೆ,ಅದಿಕಾರಿಗಳ ಸಭೆ ಕರೆಯಲಾಗಿದೆ.ವಿವಿದ ಇಲಾಖೆಗಳ ಸಹಕಾರ ಹಾಗೂ ಸಹಯೋಗದೊಂದಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ನಾನು ಕಲಿಯೋದು ಬಹಳ ಇದೆ.ಆಡಳಿತ ವ್ಯವಸ್ಥೆ ಬಗ್ಗೆ ಅರಿತು ಮೂರು ಹಂತದ ಆದ್ಯತೆ ಮೇರೆಗೆ ಕೆಲಸ ಮಾಡಲು ಬದ್ದರಾಗಿರುತ್ತೇವೆ.

ಮೊದಲ ಹಂತದಲ್ಲಿ ಜನರ ಸಮಸ್ಯೆಗೆ ಪರಿಹಾರ ದೊರೆಯುವಂತಾಗಬೇಕು. ಜನರು ಕಚೇರಿಗಳಿಗೆ ಅಲೆಯುವುದು ಹಾಗೂ ಕಾಯುವುದು ತಪ್ಪಬೇಕಿದೆ.

ಅದರಂತೆ ಅದಿಕಾರಿಗಳು ಕೆಲಸ ಮಾಡಲು ಸೂಚಿಸಲಾಗುವುದು‌.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ಶಿಲ್ಪಾ ನಾಗ್ ವಿಶ್ವಾಸದಿಂದ‌ ನುಡಿದರು.

ಅದಿಕಾರ ವಹಿಸಿಕೊಂಡಿರುವ ಶಿಲ್ಪನಾಗ್ ಅವರು ಮೊದಲು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಮರಳು ದಂದೆಗೆ ಬ್ರೇಕ್ ಹಾಕಬೇಕಾಗಿದೆ.

ಜೊತೆಗೆ ಸರ್ಕಾರಿ ಅದಿಕಾರಿಗಳಿಂದ ಸರ್ಕಾರಿ ವಾಹನ ದುರುಪಯೋಗ,ಕಚೇರಿಗೆ ವಿಳಂಬವಾಗಿ ಬರೊ ಅದಿಕಾರಿಗಳ ಮೇಲೆ ಕ್ರಮ, ಮಿಗಿಲಾಗಿ ಜಿಲ್ಲಾ ಮಟ್ಟದ ಅದಿಕಾರಿಗಳು ಜಿಲ್ಲಾ ಕೇಂದ್ರದಲ್ಲೆ ಇರಬೇಕು ಎಂಬುದು ಸೇರಿದಂತೆ ಇನ್ನಿತರ ಆಡಳಿತ ವ್ಯವಸ್ಥೆ ಸುದಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.