ಆಂಬ್ಯುಲೆನ್ಸ್ ಗೆ ಅಡ್ಡಿಪಡಿಸಿದ ಯುವಕನ ವಿರುದ್ಧ ಎಫ್‌ಐಆರ್

ಮೈಸೂರು: ಆಂಬ್ಯುಲೆನ್ಸ್ ಮುಂದೆ ಹೋಗಲು ದಾರಿ ಬಿಡದೆ ತೂಂದರೆ ಮಾಡಿದ ಬೈಕ್ ಸವಾರನ ವಿರುದ್ದ ಮೈಸೂರಿನ ವಿವಿ ಪುರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗಗನ್ ಎಂಬಾತನ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ತುರ್ತುವಾಹನ ಸಂಚಾರಕ್ಕೆ ಅಡಚಣೆ ಮಾಡಿದ ಆರೋಪದ ಮೇಲೆ ಗಗನ್‌ ವಿರುದ್ಧ ಪ್ರಕರಣ ದಾಖಲಲಾಗಿದೆ.

ಇದೇ ಜು. 9 ರಂದು ಹುಣಸೂರಿನಿಂದ ಮೈಸೂರಿಗೆ 108 ಆಂಬ್ಯಲೆನ್ಸ್ ನಲ್ಲಿ ರೋಗಿಯನ್ನ ಕರೆತರಲಾಗುತ್ತಿತ್ತು.

ನಗರದ ಬಸಪ್ಪ ಮೆಮೋರಿಯಲ್ ಆಸ್ಪತ್ರೆ ಬಳಿ ಆಂಬ್ಯಲೆನ್ಸ್ ಗೆ ಅಡ್ಡ ಬಂದ ಬೈಕ್ ಸವಾರ ವಾಹನ ಮುಂದೆ ಹೋಗಲು ಬಿಡದೆ ಅಡ್ಡಿ ಮಾಡಿದ್ದ.

ಆಂಬ್ಯಲೆನ್ಸ್ ಸಿಬ್ಬಂದಿ ಪ್ರಕಾಶ್ ಅವರು ಬೈಕ್ ಸವಾರನ ವರ್ತನೆಯನ್ನ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು.

ವಿವಿಪುರಂ ಠಾಣಾ ಪೊಲೀಸರು ಆಂಬ್ಯಲೆನ್ಸ್ ಸಿಬ್ಬಂದಿಯಿಂದ ದೂರು ಪಡೆದು ಬೈಕ್ ಸವಾರನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.