ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜು. 15 ಶನೈಶ್ಚರ ಮಹಾಯಾಗ

ಮೈಸೂರು: ಮೈಸೂರಿನ ಅವಧೂತ ದತ್ತಪೀಠ,ಶ್ರೀ ಗಣಪತಿ‌ ಸಚ್ಚಿದಾನಂದ ಆಶ್ರಮದಲ್ಲಿ ಜು.15 ರಂದು ಶನಿತ್ರಯೋದಶಿ ಪ್ರಯುಕ್ತ ಶನೈಶ್ಚರ ಮಹಾಯಾಗವು ನಡೆಯಲಿದೆ.

ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀಯವರ ದಿವ್ಯ ಆಶೀರ್ವಾದಗಳೊಂದಿಗೆ ಶನೈಶ್ಚರ ಮಹಾಯಾಗವು ನಡೆಯಲಿದೆ.

ಈ ಕಾರ್ಯಕ್ರಮದ ಪ್ರಯುಕ್ತ ಶನೈಶ್ಚರ ವ್ರತ, ಶನಿಸ್ವಾಮಿಗೆ ತೈಲಾಭಿಷೇಕ, ಶನಿಗ್ರಹ ಜಪ, ಆಂಜನೇಯ ಜಪ, ಶನಿಗ್ರಹ ಹೋಮ, ಶನಿಗ್ರಹ ದಾನಗಳು ಹಾಗೂ ಸುಂದರಕಾಂಡ ಪಾರಾಯಣಗಳು ನಡೆಯಲಿವೆ.

ಭಕ್ತಾದಿಗಳು ಈ ಸದವಕಾಶವನ್ನು ವಿನಿಯೋಗಪಡಿಸಿಕೊಂಡು ಶನೈಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದತ್ತಪೀಠ ವಿನಂತಿಸಿದೆ.

ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ (ಆನ್ ಲೈನ್ ಮೂಲಕ) ಭಾಗವಹಿಸುವ ಭಕ್ತರೆಲ್ಲರಿಗೂ ಪ್ರಸಾದವನ್ನು ತಲುಪಿಸಲಾಗುವುದು.

ಪ್ರತ್ಯಕ್ಷವಾಗಿ ಭಾಗವಹಿಸುವವರು ಸಂಕಲ್ಪಮಾಡಿಸಿಕೊಂಡು ತೈಲಾಭಿಷೇಕವನ್ನು ಮಾಡಬಹುದು.

ಮಕರ, ಕುಂಭ, ಮೀನ ರಾಶಿಗಳವರಿಗೆ ಏಳರಾಟದ ಶನಿ, ಕರ್ಕಾಟಕ ರಾಶಿಯವರಿಗೆ ಅಷ್ಟಮಶನಿ, ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಶನಿ ನಡೆಯುತ್ತಿದೆ.

ಆಯಾ ರಾಶಿಗಳವರು ಈ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಂಡು ಶನಿದೋಷವನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಜಾತಕದಲ್ಲಿ ಶನಿಯು ಬಲಹೀನವಾಗಿ ಇರುವವರೂ ಸಹ ಇದರಲ್ಲಿ ಭಾಗವಹಿಸಬಹುದು.

ಕೀಲುನೋವುಗಳಿಂದ ಬಳಲುತ್ತಿರುವವರು, ಸೋಮಾರಿತನದಿಂದ ನಿಗಧಿತ ಸಮಯದಲ್ಲಿ ಕೆಲಸಗಳನ್ನು ಮಾಡಲಾಗದೆ ಆಲಸ್ಯ ಮಾಡುವವರೂ ಸಹ ಈ ಪರಿಹಾರ ಪೂಜಾದಿಗಳಲ್ಲಿ ಭಾಗವಹಿಸಬಹುದಾಗಿದೆ.