ಕೊನೆಯ ಆಷಾಢ‌ ಶುಕ್ರವಾರ: ಚಾಮುಂಡಿ ‌ಬೆಟ್ಟದಲ್ಲಿ ಭಕ್ತ ಸಾಗರ

ಮೈಸೂರು: ಚಾಮುಂಡಿಬೆಟ್ಟದಲ್ಲಿ 4ನೇ ಹಾಗೂ‌ ಕೊನೆಯ ಆಷಾಢ ಶುಕ್ರವಾರ ಪ್ರಯುಕ್ತ ಅತಿಹೆಚ್ಚು‌ ಭಕ್ತರು ತಾಯಿಯ ದರ್ಶನ‌ ಪಡೆದಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.

ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಇಂದು ದೇವಿಚಾಮುಂಡಿ ಸನ್ನಿಧಿಗೆ ರಾಜ್ಯದ ಮೂಲೆ,ಮೂಲೆಯಿಂದ ಭಕ್ತಸಾಗರ ಹರಿದುಬಂದಿದೆ.

ಮುಂಜಾನೆ 3.30ಕ್ಕೆ ಪೂಜಾ ಕಾರ್ಯಗಳು ಆರಂಭವಾಯಿತು.

ಮಹಾ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ದೇವಸ್ಥಾನದ ಪ್ರಾಂಗಣವನ್ನ ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದು,ನೋಡಲು ಅತಿ ಸುಂದರವಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿಭದ್ರತೆ ಒದಗಿಸಲಾಗಿದೆ.