ವೀಲಿಂಗ್ ಪಿಡುಗಿಗೆ ಶಿಕ್ಷಕಿ ಸ್ಥಿತಿ ಗಂಭೀರ

ಮೈಸೂರು: ಮೈಸೂರಿನಲ್ಲಿ ವೀಲಿಂಗ್ ಪಿಡಿಗು ಅತಿಯಾಗಿದ್ದು ಇದಕ್ಕೆ ಶಿಕ್ಷಕಿಯೊಬ್ಬರು ಗಂಭೀರವಾಗಿ ‌ಗಾಯಗೊಂಡಿದ್ದಾರೆ.

ಯುವಕರ‌ ವೀಲಿಂಗ್ ಅಟ್ಟಹಾಸದಿಂದ ಪೊಲೀಸ್ ಪಬ್ಲಿಕ್ ಸ್ಕೂಲ್ ವಿಜ್ಞಾನ ಶಿಕ್ಷಕಿ ಎಚ್. ಬಿ ಅನಿತಾ ರವರು ಗಾಯಗೊಂಡು ಜೀವನ್ಮರಣದ‌ ಜೊತೆ ಹೋರಾಡುತ್ತಿದ್ದಾರೆ.

ಜುಲೈ 18 ರಂದು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಗಾಯತ್ರಿ ಪುರಂ ಚರ್ಚ್ ಬಳಿ ಕೆಟಿಎಂ ಬೈಕ್ ನಲ್ಲಿ ಬಂದ ತ್ರಿಬಲ್ ರೈಡಿಂಗ್ ಸವಾರರು ವೀಲಿಂಗ್ ಮಾಡಿಕೊಂಡು ಬಂದು ಶಿಕ್ಷಕಿಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾರೆ.

ಇದರಿಂದ ಶಿಕ್ಷಕಿಯ ತಲೆಗೆ ಗಾಯವಾಗಿ ರಕ್ತಸ್ರಾವದಿಂದ ಜ್ಞಾನ ತಪ್ಪಿ ಬಿದ್ದಿದ್ದಾರೆ.

ತಕ್ಷಣ ಸಾರ್ವಜನಿಕರು ಅವರನ್ನು ಅಪಲೋ ಆಸ್ಪತ್ರೆಗೆ ದಾಖಲು ಮಾಡಿದ್ದು,ತೀವ್ರ ನಿಘಾ‌‌ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಸವಾರರು ಸ್ಥಳದಲ್ಲೇ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ. ಬೈಕ್ ಮೈಸೂರಿನ ಕುರುಬರಹಳ್ಳಿಯ ಆದಿತ್ಯ ಎಂಬುವರ ಹೆಸರಿನಲ್ಲಿದೆ.

ಈ ಬಗ್ಗೆ ಮೈಸೂರು ಸಿದ್ದಾರ್ಥ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.