ಮೈಸೂರು: ಜಿಂಕೆ ಬೇಟೆಯಾಡಿ ಹೊಲದಲ್ಲಿ ಮಾಂಸವನ್ನು ಬಚ್ಚಿಟ್ಟಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಹುಣಸೂರು ತಾಲೂಕು, ಹನಗೋಡು ಹೋಬಳಿ ವ್ಯಾಪ್ತಿಯ ವನ್ಯ ಜೀವಿ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಹೊಲದಲ್ಲಿ ಮಾಂಸವನ್ನು ಬಚ್ಚಿಟ್ಟಿದ್ದನ್ನು ಪತ್ತೆ ಹಚ್ಚಿದ್ದಾರೆ.
ವನ್ಯಜೀವಿ ವ್ಯಾಪ್ತಿಯ ನೇಗತ್ತೂರಿನ ಜಮೀನೊಂದರಲ್ಲಿ ಸಂಗ್ರಹಿದ್ದ ಜಿಂಕೆ ಮಾಂಸ ಮತ್ತು ಅದಕ್ಕೆ ಬಳಸಿದ್ದ ಮೂರು ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದರಲ್ಲಿ ನಾಲ್ಕು ಆರೋಪಿಗಳು ಶಾಮೀಲಾಗಿದ್ದು, ಅಬ್ಬೂರಿನ ಮಧು, ಸಿಂಡೇನಹಳ್ಳಿ ಗ್ರಾಮದ ಪ್ರದೀಪ್ ಆಲಿಯಾಸ್ ಕುಂಡನನ್ನು ಬಂಧಿಸಲಾಗಿದೆ.
ಮತ್ತಿಬ್ಬರು ಆರೋಪಿಗಳಾದ ರಾಜು , ಪ್ರಸನ್ನ ಅವರ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಯಾನಂದ್ ರವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳಾದ ರತನ್ ಕುನಾರ್, ಗಣರಾಜ್ ಪಟಕಾರ್, ಸಿದ್ದರಾಜು, ಹೆಚ್.ಎಸ್.ಪ್ರಸನ್ನ ಕುಮಾರ್, ವೀರಭದ್ರಯ್ಯ, ಮನೋಹರ್, ಎಂ.ರಾಮು ಗಸ್ತು ವನಪಾಲಕರಾದ, ವಸಂತ ಕುಮಾರ್, ಲಿಂಗರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.