ಮೈಸೂರು: ಅಂಗಡಿ ಮುಂದೆ ನಿಂತು ಸಿಗರೇಟ್ ಸೇದುವವರೆ ಎಚ್ಚರದಿಂದಿರಿ.ಈ ಕೆಟ್ಟ ಅಭ್ಯಾಸ ಕೈಬಿಡಿ,ಇಲ್ಲದಿದ್ದರೆ ಪೊಲೀಸರು ದಂಡ ಪೀಕಿಸುವುದು ಗ್ಯಾರಂಟಿ.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಾ ಇತರರಿಗೆ ಮುಜುಗರ ತರುವವರಿಗೆ ಕುವೆಂಪುನಗರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಯುವಕರಿಗೆ ಟೀ ಕೊಟ್ಟು ಸಿಗರೇಟ್ ಸೇದಲು ಅವಕಾಶ ಕಲ್ಪಿಸಿಕೊಟ್ಟ ಚಾಯ್ ವಾಲಾಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಗರೇಟ್ ಸೇದುತ್ತಾ ಕಾಲಹರಣ ಮಾಡುತ್ತಿದ್ದ ದಂಡ ವಿಧಿಸಲಾಗಿದ್ದು, ತಲಾ 100 ರೂ ದಂಡ ವಿಧಿಸಲಾಗಿದೆ.
ಟೀ ಅಂಗಡಿ ಮಾಲೀಕರಿಗೆ 200 ರೂ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
ಕುವೆಂಪುನಗರ ಠಾಣಾ ವ್ಯಾಪ್ತಿಯ ಬಹುತೇಕ ಟೀ ಅಂಗಡಿಗಳ ಮುಂದೆ ನಿಂತು ಸಿಗರೇಟ್ ಸೇದಿದ ಯುವಕರಿಗೆ ದಂಡ ವಿಧಿಸಲಾಗಿದೆ.
ಸುಮಾರು 15 ದಿನಗಳಲ್ಲಿ 127 ಪ್ರಕರಣಗಳನ್ನು ದಾಖಲಿಸಿ.ಟೀ ಮಾಲೀಕರು ಹಾಗೂ ಸಿಗರೇಟ್ ಸೇವನೆ ಮಾಡಿದ ಯುವಕರು ಸೇರಿದಂತೆ ಒಟ್ಟು 18,800 ರೂ ದಂಡ ವಸೂಲಿ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ಅವರ ಸೂಚನೆ ಮೇರೆಗೆ ಹಾಗೂ ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಎಲ್.ಅರುಣ್ ಅವರು ಕಾರ್ಯಾಚರಣೆ ನಡೆಸಿದರು.