ಕೈ ಕೊಟ್ಟ ಪ್ರಿಯಕರ: ಬೇಸತ್ತ ಯುವತಿ ಆತ್ಮಹತ್ಯೆ

ಮೈಸೂರು : ಪ್ರಿಯಕರ ಕೈ ಕೊಟ್ಟನೆಂದು ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.

ಕೆ.ಅರ್. ನಗರ ತಾಲೂಕು ಗೌಡೇನಹಳ್ಳಿ ಗ್ರಾಮದ ಯುವತಿ ನಿಸರ್ಗ (20)‌ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ನಿಸರ್ಗ

4 ವರ್ಷದಿಂದ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.

ಪ್ರೀತಿಸಿ ಎಲ್ಲಾ ಕಡೆ ಸುತ್ತಾಡಿದ ಸುಹಾಸ್ ರೆಡ್ಡಿ ನಿಸರ್ಗಗೆ ಕೈ ಕೊಟ್ಟು ಮತ್ತೊಬ್ಬ ಯುವತಿಯನ್ನ ಪ್ರೀತಿಸುತ್ತಿದ್ದ.

ಆತ್ಮಹತ್ಯೆಗೂ ಮುನ್ನ ನಿಸರ್ಗ ಡೆತ್ ನೋಟ್ ಬರೆದಿಟ್ಟಿದ್ದು, ಸುಹಾಸ್ ತಂದೆ ತಾಯಿಗೆ ವಿಚಾರ ಹೇಳಿದರೂ ಸ್ಪಂದಿಸಲಿಲ್ಲ ಅವಮಾನಿಸದರೆಂದು ತಿಳಿಸಿದ್ದಾಳೆ

ಸಾವಿಗೂ ಮುನ್ನ ಕೈ ಕೊಯ್ದುಕೊಂಡು ರೀಲ್ಸ್ ಮಾಡಿರುವ ಯುವತಿ, ನನ್ನ ಸಾವಿಗೆ ಅನನ್ಯ, ಸುಹಾಸ್ ಹಾಗೂ ತಂದೆ ಗೋಪಾಲಕೃಷ್ಣ ಕಾರಣ, ಅವರನ್ನು ಸುಮ್ಮನೆ ಬಿಡಬೇಡಿ. ಅಪ್ಪ,  ನನ್ನನ್ನು ಕ್ಷಮಿಸಿಬಿಡಿ ಎಂದು ಬರೆದಿದ್ದಾಳೆ.

ವಿಷ ಸೇವಿಸಿ ಅಸ್ಪತ್ರೆಗೆ ದಾಖಲಾಗಿದ್ದ ನಿಸರ್ಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ನಿಸರ್ಗ ಡೆತ್ ನೋಟ್ ಆಧರಿಸಿ ಕೆ.ಆರ್. ನಗರ ಪೊಲೀಸರು  ನಾಲ್ವರ ವಿರುದ್ಧ FIR ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.