ಮೈಸೂರ್ ಪಾಕ್ ಗೆ ಜಾಗತಿಕ ಮನ್ನಣೆ: ಚಾಮುಂಡಿ‌ ಬೆಟ್ಟದಲ್ಲಿ ಸಂಭ್ರಮ

ಮೈಸೂರು: ಮೈಸೂರ್ ಪಾಕ್ ಗೆ ಜಾಗತಿಕ ಮನ್ನಣೆ ಸಿಕ್ಕಿರುವುದನ್ನು ಸ್ವಾಗತಿಸಿ ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಮೈಸೂರು ಪಾಕ್ ವಿತರಣೆ‌ ಮಾಡಿ ಸಂಭ್ರಮಿಸಲಾಯಿತು.

ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ ಮೈಸೂರು ಪಾಕ್ ವಿಶ್ವ ಖ್ಯಾತಿ ಗಳಿಸಿರುವ  ಹಿನ್ನಲೆಯಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿ ಬೆಟ್ಟದಲ್ಲಿ  ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಮೈಸೂರು ಪಾಕ್ ವಿತರಿಸಿ ಇದರ ಮಹತ್ವ ಹಾಗೂ ಅದರ ಇತಿಹಾಸ ತಿಳಿಸಲಾಯಿತು.

ಈ‌ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಮೈಸೂರು ಪಕ್ ಗೆ ಈ ಸ್ಥಾನ ಬಂದಿರುವುದು ಮೈಸೂರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಮೈಸೂರು ಪಾಕು ಶಕ್ತಿ ಹಾಗೂ ಆರೋಗ್ಯವಾಗಿರುವುದಕ್ಕೆ ಸಹಾಯಮಾಡುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಇರುವ ಮೈಸೂರು ಪಾಕ್ ಇಂದು ವಿಶ್ವಾದ್ಯಂತ ತನ್ನ ಹಿರಿಮೆ ಸಾರುತ್ತಿದೆ, ಹಾಗೆಯೇ ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಅಪೂರ್ವ ಸುರೇಶ್ ಸಲಹೆ ನೀಡಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ. ಡಿ ಪಾರ್ಥಸಾರಥಿ ಕರ್ನಾಟಕದ ಜನಪ್ರಿಯ ಸಿಹಿ ತಿನಿಸು ಮೈಸೂರ್ ಪಾಕ್ ನ ರುಚಿಯನ್ನು ಸವಿಯದವರೇ ವಿರಳ ಎಂದು ಹೇಳಿದರು.

ವಿಶ್ವದ ಸಿಹಿತಿನಿಸುಗಳ ಪಟ್ಟಿಯಲ್ಲಿ ನಮ್ಮ ಮೈಸೂರ್‌ಪಾಕ್‌ಗೆ 14ನೇ ಸ್ಥಾನ ದಕ್ಕಿರುವುದು ಕರ್ನಾಟಕ ಪಾಲಿಗೆ ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ಮೈಸೂರುಪಾಕ್‌ಗೆ 90 ವರ್ಷಗಳ ಇತಿಹಾಸವಿದೆ. ಈ ಖಾದ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮೈಸೂರು ಅರಮನೆಯ ಬಾಣಸಿಗ ಮಾದಪ್ಪ ಅವರಿಗೆ ಸಲ್ಲಬೇಕು.ನಮ್ಮಮೈಸೂರು ಪಾಕ್ ಮೊದಲ ಸ್ಥಾನಕ್ಕೆ ‌ಬರುವಂತಾಗಲಿ ಎಂದು ಆಶಿಸಿದರು.

ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ ದೀಕ್ಷಿತ್,  ಜಗದೀಶ್,  ಸಾಮಾಜಿಕ ಚಿಂತಕರಾದ ದೂರ ರಾಜಣ್ಣ, ಆನಂದ್ ದಯಾನಂದ, ಆದರ್ಶ್, ಅಮರ್ ಬಾಬು ಮತ್ತಿತರರು ಹಾಜರಿದ್ದರು.