ಮೈಸೂರು: ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆ ಪ್ರಾರಂಭವಾಗುತ್ತಿದ್ದಂತೆ ನಕಲಿ ಸರ್ಟಿಫಿಕೇಟ್ ಹಾವಳಿ ಹೆಚ್ಚಾಗಿದ್ದು ಜನತೆ ಎಚ್ಚೆತ್ತುಕೊಳ್ಳಬೇಕಿದೆ.
ಸಾಕಷ್ಟು ಮಹಿಳೆಯರು ನೊಂದಣಿಗಾಗಿ ಸೈಬರ್ ಸೆಂಟರ್ ಗಳ ಮೊರೆ ಹೋಗುತ್ತಿದ್ದಾರೆ.ಆದರೆ ಇದನ್ನೆ ಲಾಭ ಮಾಡಿಕೊಳ್ಳಲು ಖದೀಮರು ಮುಂದಾಗಿದ್ದು ಇಂತವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ
ಗೃಹಲಕ್ಷ್ಮಿ ಯೋಜನೆಯ ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕನನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿ ನಕುಲ್ ನೆಟ್ ವರ್ಲ್ಡ್ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಸೇವಾ ಕೇಂದ್ರ ನಡೆಸುತ್ತಿರುವ ಮಾಲೀಕ ಸುರೇಶ್ ಕುಮಾರ್ ಬಂಧಿತ ಆರೋಪಿ.
ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಸೈಬರ್ ಸೆಂಟರ್ ಮೇಲೆ ದಾಳಿ ನಡೆಸಿ, ಪೊಲೀಸರು ಕೆಲವು ಫೇಕ್ ಸರ್ಟಿಫಿಕೇಟ್ ಗಳನ್ನ ವಶಪಡಿಸಿಕೊಂಡಿದ್ದಾರೆ.
ಕಂಪ್ಯೂಟರ್ ಗಳನ್ನ ಸೀಜ್ ಮಾಡಲಾಗಿದೆ. ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಗೆ ಬೀಗ ಹಾಕಲಾಗಿದೆ.
ಖದೀಮ ಸುರೇಶ್ ಕುಮಾರ್ ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸಿ ಮಹಿಳೆಯರನ್ನ
ಯಾಮಾರಿಸುತ್ತಿದ್ದ.
ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಮಾರ್ಗದರ್ಶನದಲ್ಲಿ ಡಿಸಿಪಿ ಗಳಾದ ಮುತ್ತುರಾಜ್ ಮತ್ತು ಜಾಹ್ನವಿ ರವರ ಉಸ್ತುವಾರಿಯಲ್ಲಿ ಎಸಿಪಿ ಗಜೇಂದ್ರ ಪ್ರಸಾದ್ ಮತ್ತು ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ದಿವಾಕರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.