ತಿರುಮಲದಲ್ಲಿ ವಸತಿಗೃಹ, ಕಲ್ಯಾಣ ಮಂಟಪ‌ಗಳ‌ ಕಾಮಗಾರಿ ಪರಿಶೀಲಿಸಿದ‌ ಸಚಿವ‌ ರಾಮಲಿಂಗಾರೆಡ್ಡಿ

ತಿರುಮಲ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿ‌ ವೆಂಕಟರಮಣನ ದರುಶನಕ್ಕೆ ಕರ್ನಾಟಕ ಸೇರಿದಂತೆ ದೇಶ ವಿಧೇಶಗಳಿಂದ ಭಕ್ತರು ಆಗಮಿಸುತ್ತಾರೆ.

ತಿರುಪತಿ-ತಿರುಮಲಕ್ಕೆ ಕರ್ನಾಟಕದಿಂದ ಆಗಮಿಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಸತಿಗೃಹ ಹಾಗೂ ಕಲ್ಯಾಣ ಮಂಟಪ‌ಗಳನ್ನು ನಿರ್ಮಿಸಲಾಗುತ್ತಿದೆ.

ವಸತಿಗೃಹ ಹಾಗೂ ಕಲ್ಯಾಣ
ಮಂಟಪದ ಕಾಮಗಾರಿಯನ್ನು ಕರ್ನಾಟಕದ ಸಾರಿಗೆ ಮತ್ತು ಮುಜರಾಯಿ ಸಚಿವ‌ ರಾಮಲಿಂಗಾರೆಡ್ಡಿ ಅವರು ಪರಿಶೀಲನೆ ನಡೆಸಿದರು.

ಇವುಗಳ ನಿರ್ಮಾಣದ ವೆಚ್ಚ ಸುಮಾರು 220 ಕೋಟಿ ಆಗಲಿದ್ದು,ಬರುವ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

300 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಕರ್ನಾಟಕದ ಭಕ್ತರಿಗಾಗಿ ತಿರುಮಲದಲ್ಲಿ 7 ಎಕರೆ ಭೂಮಿಯನ್ನು ಖರೀದಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಜುಲೈ 26ರಂದು
ಚಾಲನೆ ನೀಡಿದ್ದರು.

ಹಾಗಾಗಿ‌ ಕರ್ನಾಟಕದ‌ ಜನತೆಗೆ ಜುಲೈ‌26‌ ನಿಜಕ್ಕೂ‌‌ ವೆಶೇಷ‌ ದಿನವೇ ಸರಿ.

ಈ ದಿನದ ವಿಶೇಷತೆಯ ಪ್ರಯುಕ್ತ ತಿರುಮಲದಲ್ಲಿ ಶ್ರೀವಾರಿ ಪಲ್ಲೋತ್ಸವ ದೇವರ ವಿಶೇಷ ಸೇವೆ ನಡೆಯುತ್ತಾ ಬಂದಿದೆ.

ಶ್ರೀವಾರಿ ಉತ್ಸವ ಮೂರ್ತಿಗೆ ವರ್ಷಕ್ಕೊಮ್ಮೆ ವಜ್ರ ವೈಡೂರ್ಯಗಳ ಅಲಂಕಾರದ ಉತ್ಸವವನ್ನೂ ಕೂಡಾ ನೆರವೇರಿಸಲಾಗುತ್ತದೆ.

ಅಂತೆಯೇ‌ ಈ‌ ಬಾರಿ ಕೂಡಾ ಈ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.ರಾಮಲಿಂಗಾರೆಡ್ಡಿ, ರಾಜ ಮಾತೆ ಪ್ರಮೋದಾ ದೇವಿ ಒಡೆಯರ್ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯದ ಜನತೆಗೆ ಸುಭಿಕ್ಷತೆ, ಆರೋಗ್ಯ ದಯಪಾಲಿಸಲೆಂದು ದೇವರಲ್ಲಿ ರಾಮಲಿಂಗಾರೆಡ್ಡಿ ಹಾಗೂ ಪ್ರಮೋದಾ ದೇವಿಯವರು ಪ್ರಾರ್ಥನೆ ಮಾಡಿದ್ದಾರೆ.

ತಿರುಮಲದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ಕೂಡಾ‌ ಈ ಸಂದರ್ಭದಲ್ಲಿ ಸಚಿವ‌ ರಾಮಲಿಂಗಾರೆಡ್ಡಿ ನಡೆಸಿದರು.

ಶಾಸಕರು ಹಾಗೂ ಟಿಟಿಡಿ ಸದಸ್ಯರಾದ ಎಸ್.ಆರ್ ವಿಶ್ವನಾಥ್, ಇಒ ದರ್ಣ ರೆಡ್ಡಿ, ಕೃಷ್ಣಮ್ ರಾಜು, ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಹಾಗೂ ಮುಜರಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಮತ್ತಿತರರು ಈ ವೇಳೆ ಹಾಜರಿದ್ದರು.