ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸತ್ಯನಾರಾಯಣ ವ್ರತ

ಮೈಸೂರು: ಮೈಸೂರು ನಗರದ ಅವಧೂತ ದತ್ತ ಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಗಸ್ಟ್ ಒಂದು ಮಂಗಳವಾರ ಅಧಿಕ ಶ್ರಾವಣ ಮಾಸದ ಹುಣ್ಣಿಮೆ ಪ್ರಯುಕ್ತ ಸತ್ಯನಾರಾಯಣ ವ್ರತ ಮತ್ತು ಪೂಜೆಯನ್ನು ಬೆಳಗ್ಗೆ ೧೦ ಗಂಟೆಯಿಂದ ೧೨ ರವರೆಗೆ ಹಮ್ಮಿಕೊಳ್ಳಲಾಗಿದೆ.

ಅನೇಕ ವರ್ಷಗಳಿಂದ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಪ್ರತಿ ಹುಣ್ಣಿಮೆಯಂದು ಪವಮಾನ ಹೋಮ ನಡೆಯುತ್ತಿತ್ತು.

ಇನ್ನು ಮುಂದೆ ಪ್ರತಿ ಹುಣ್ಣಿಮೆಗಳಂದು, ಪವಮಾನ ಹೋಮದ ಜೊತೆಗೆ ಶ್ರೀ ಸತ್ಯ ನಾರಾಯಣ ವ್ರತ ಮತ್ತು ಪೂಜೆಗಳನ್ನು ಸಹ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯ ಅನುಗ್ರಹದೊಂದಿಗೆ  ನಡೆಸಲಾಗುತ್ತದೆ.

ಭಕ್ತಾದಿಗಳು ಶ್ರೀ ಸತ್ಯನಾರಾಯಣ ವ್ರತ ಮತ್ತು ಪೂಜೆಗಳನ್ನು ವೇದ ಪಂಡಿತರ ಸೂಚನೆಗಳಂತೆ ಸ್ವತಃ ಅಚರಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

ಈ ವ್ರತಕ್ಕೆ ಬೇಕಾದ ಪೂಜಾ ದ್ರವ್ಯಗಳು ಆಶ್ರಮದಲ್ಲಿ ದೊರೆಯುತ್ತದೆ. ಅನೇಕರಿಗೆ ಮನೆಗಳಲ್ಲಿ ಸತ್ಯನಾರಾಯಣ ವ್ರತ, ಪೂಜೆ ಮಾಡಲು ಇಚ್ಛೆ ಇದ್ದರೂ, ಅವಕಾಶವಿರುವುದಿಲ್ಲ. ಅಂತವರೂ ಸಹ ಈ ಸದವಕಾಶ ಪಡೆಯಬಹುದು.

ಪ್ರತಿ ತಿಂಗಳು ಬರುವ ಹುಣ್ಣೆಮೆಯಂದು ಪವಮಾನ ಹೋಮ, ಶ್ರೀ ಸತ್ಯನಾರಾಯಣ ವ್ರತ ಮತ್ತು ಪೂಜಾ ಕೈಂಕರ್ಯಗಳು ಆಶ್ರಮದಲ್ಲಿ ನಡೆಯಲಿದ್ದು ಎಲ್ಲಾ ಭಕ್ತರಿಗೂ ಪ್ರಸಾದವನ್ನು ನೀಡಲಾಗುತ್ತದೆ

ಮಂಗಳವಾರ ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ

ಸ್ವಾಮೀಜಿಯವರು ವಹಿಸುವರು.

ಹೆಚ್ಚಿನ ಮಾಹಿತಿಗೆ ದೂರವಾಣಿ: ೦೮೨೧-೨೪೮೬೪೮೬ ಮತ್ತು ಸಿದ್ದಾರ್ಥ : 94483 90946 ಅವರನ್ನು ಸಂಪರ್ಕಿಸಬಹುದು.