ಮೈಸೂರು: ಮೈಸೂರು ನಗರದ ಅವಧೂತ ದತ್ತ ಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಂಗಳವಾರ ಅಧಿಕ ಶ್ರಾವಣ ಮಾಸದ ಹುಣ್ಣಿಮೆ ಪ್ರಯುಕ್ತ ಸತ್ಯನಾರಾಯಣ ವ್ರತ ಮತ್ತು ಪೂಜೆಯನ್ನು ನೆರವೇರಿಸಲಾಯಿತು.
ಅನೇಕ ವರ್ಷಗಳಿಂದ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಪ್ರತಿ ಹುಣ್ಣಿಮೆಯಂದು ಪವಮಾನ ಹೋಮ ಮಾತ್ರ ನಡೆಯುತ್ತಿತ್ತು.
ಈ ಬಾರಿಯಿಂದ ಭಕ್ತರ ಅನುಕೂಲಕ್ಕಾಗಿ ಪ್ರತಿ ಹುಣ್ಣಿಮೆಗಳಂದು, ಪವಮಾನ ಹೋಮದ ಜೊತೆಗೆ ಶ್ರೀ ಸತ್ಯ ನಾರಾಯಣ ವ್ರತ ಮತ್ತು ಪೂಜೆಯನ್ನು ಸಹ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯ ಅನುಗ್ರಹದೊಂದಿಗೆ ನಡೆಸಲಾಗುತ್ತಿದೆ.
ಈ ಹುಣ್ಣಿಮೆಯಂದು ಭಕ್ತಾದಿಗಳು ಶ್ರೀ ಸತ್ಯನಾರಾಯಣ ವ್ರತ ಮತ್ತು ಪೂಜೆಯನ್ನು ವೇದ ಪಂಡಿತರ ಸೂಚನೆಯಂತೆ ಸ್ವತಃ ಅಚರಣೆ ಮಾಡಿದರು.
ಭಕ್ತರಿಗೆ ಈ ವ್ರತಕ್ಕೆ ಬೇಕಾದ ಹೂವು, ಹಣ್ಣು, ಪೂಜಾ ದ್ರವ್ಯಗಳು, ಸತ್ಯನಾರಾಯಣ ಸ್ವಾಮಿ ಫೋಟೊ,ಪ್ರಸಾದವನ್ನು ಆಶ್ರಮದ ವತಿಯಿಂದ ಉಚಿತವಾಗಿ ನೀಡಲಾಯಿತು.
ಅನೇಕರಿಗೆ ಮನೆಗಳಲ್ಲಿ ಸತ್ಯನಾರಾಯಣ ವ್ರತ, ಪೂಜೆ ಮಾಡಲು ಇಚ್ಛೆ ಇದ್ದರೂ, ಅವಕಾಶವಿರುವುದಿಲ್ಲ,
ಅಂತವರಿಗೆಂದೇ ಶ್ರೀಗಳು ಆಶ್ರಮದಲ್ಲೇ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಪೂಜಾ ಕಾರ್ಯಕ್ರಮಗಳೆಲ್ಲಾ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ನೆರವೇರಿತು.