ಮೈಸೂರು: ಮೈಸೂರು ಕೇಂದ್ರ ಕಾರಾಗೃಹದಿಂದ ಬೆಂಗಳೂರು ಜೈಲಿಗೆ ವರ್ಗಾವಣೆ ಮಾಡುವಂತೆ ಸ್ಯಾಂಟ್ರೋ ರವಿ ಆಲಿಯಾಸ್ ಮಂಜುನಾಥ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ಇತ್ತ ಜೈಲಿನ ಅಧಿಕಾರಿಗಳಿಗೂ ಸ್ಯಾಂಟ್ರೋ ರವಿ ತಲೆ ನೋವೇ,ಹಾಗಾಗಿ ಆತ ಬೇರೆಡೆ ಹೋದರೆ ಸಾಕು ಅಂದುಕೊಳ್ಳುತ್ತಿದ್ದಾರೆ.
ಮೈಸೂರು ನ್ಯಾಯಾಲಯಕ್ಕೆ ಆತ ಲಿಖಿತ ಮನವಿ ಮಾಡಿದ್ದಾನೆ.
ವೇಶ್ಯಾವಾಟಿಕೆ, ವರ್ಗಾವಣೆ ದಂಧೆ, ಮಹಿಳೆಗೆ ವಂಚನೆ ಪ್ರಕರಣದ ಆರೋಪಿಯಾಗಿರುವ ಸ್ಯಾಂಟ್ರೋ ರವಿ
ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ.
ಜೈಲಿನ ಅಧಿಕಾರಿಗಳಿಗೆ ಗೌರವ ನೀಡದೆ ಅನುಚಿತವಾಗಿ ವರ್ತಿಸುವುದು, ಕಾರಾಗೃಹದ ನಿಯಮಗಳನ್ನು ಪಾಲಿಸದೆ
ಅಧಿಕಾರಿಗಳಿಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡುವುದು ಸ್ಯಾಂಟ್ರೊ ರವಿಯ ಚಾಳಿಯಾಗಿಬಿಟ್ಟಿದೆ.
ಅಲ್ಲದೆ ಬೇರೆ ಖೈದಿಗಳ ಜೊತೆಗೂ ಗಲಾಟೆ ಮಾಡುತ್ತಾ ತಲೆನೋವಾಗಿ ಪರಿಣಮಿಸಿದ್ದಾನೆ.
ಕೆಲ ದಿನಗಳಿಂದ ತನಗೆ ವಿಶೇಷ ಸೌಲಭ್ಯ ನೀಡಬೇಕೆಂದು ಅಧಿಕಾರಿಗಳಿಗೇ ಧಮ್ಕಿ ಕೂಡಾ ಹಾಕುತ್ತಾನೆಂದು ತಿಳಿದು ಬಂದಿದೆ.
ನಾನು ಮೈಸೂರು ಜೈಲಿನಲ್ಲಿ ಇರುವುದಿಲ್ಲ ಬೆಂಗಳೂರಿಗೆ ಕಳಿಸಿ ಎಂದು ಪ್ರತಿದಿನ ಒತ್ತಡ ಹೇರುತ್ತಿದ್ದಾನೆ.
ನ್ಯಾಯಾಲಯ ಏನು ಹೇಳಲಿದೆಯೋ ಬೆಂಗಳೂರಿಗೆ ಕಳುಹಿಸಲು ಒಪ್ಪಲಿದೆಯೊ ಏನೆಂಬುದನ್ನು ಕಾದು ನೋಡಬೇಕಿದೆ.