ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ

ಬೆಂಗಳೂರು: ವಿದೇಶ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಗುಡುಗಿದ್ದಾರೆ

ಗುತ್ತಿಗೆದಾರರಿಗೆ ಪರ್ಸೆಂಟೇಜ್ ನಿಗದಿ ಮಾಡಿ, ವಸೂಲಿ ಕೆಲಸವನ್ನ ಕಾಂಗ್ರೆಸ್ ಮುಂದುವರೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಾನು ಯೂರೋಪ್ ಪ್ರವಾಸದಲ್ಲಿದ್ದಾಗಲೇ ಕಮಿಷನ್ ಬಗ್ಗೆ ಮಾಹಿತಿ ಬಂತು ಬೆಂಗಳೂರಿನಲ್ಲಿ ಮಂತ್ರಿಗಳು, ಮಂತ್ರಿಗಳ ಚೇಲಾಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಅಂತಾ.

ಇಂತವರು ರಾಹುಲ್ ಗಾಂಧಿ ಮುಂದೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತಾರಂತೆ. ಹೊರ ನೋಟಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎನ್ನುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಂದಿನಿಂದಲೂ ಕಾಂಗ್ರೆಸ್ ವಸೂಲಿಗಾಗಿಯೇ ಇದೆ ಎಂದು ದೂರಿದರು.

ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ​ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾವು ಕುಟುಂಬ ಸಮೇತ ಪ್ರವಾಸ ಹೋಗಿದ್ದು ಯುರೋಪ್​ಗೆ ಎಂದು ಹೇಳಿದರು.

ಆದರೆ ಸರ್ಕಾರ ಕೆಡವಲು ಹೋಗಿದ್ದೇವೆ ಎಂಬ ರೀತಿ ಬಿಂಬಿಸಲಾಗಿದೆ. 19 ಸ್ಥಾನ ಗೆದ್ದ ನಮ್ಮ ಬಗ್ಗೆ ಎಷ್ಟು ಭಯ ಇದೆ ಎಂದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಡಿಕೆಶಿ ಗೆ ಟಾಂಗ್ ನೀಡಿದರು ಕುಮಾರಸ್ವಾಮಿ.