ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಸಮಾಧಾನಕ್ಕೆ ಏನಾದರೂ ಮಾತನಾಡಲಿ, ಪಾಪ ಅವರು ಈಗಿನ್ನೂ ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಟಾಂಗ್ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪಕ್ಕೆ ಡಿ.ಕೆ.ಶಿ ವ್ಯಂಗ್ಯವಾಡಿದರು.
ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ
ಮಾಯನೋ ಜ್ಯೋತಿಷ್ಯನೋ, ಧರ್ಮನೋ, ಶ್ರಮನೋ ಅಂತೂ 3 ವರ್ಷದ ಶ್ರಮ ಇದೆ. ಕಾರ್ಯಕರ್ತರನ್ನ ಮಲಗಲು ಬಿಟ್ಟಿಲ್ಲ,ಹಗಲಿರುಳು ದುಡಿದು ಅಧಿಕಾರ ತಂದುಕೊಟ್ಟಿದ್ದಾರೆ, ಕುಮಾರಸ್ವಾಮಿಗೆ ಖುಷಿ ಸಿಗುವುದಾದರೇ ಮಾತನಾಡಲಿ ಬಿಡಿ ಎಂದು ಹೇಳಿದರು.