ಮೈಸೂರು: ವ್ಹೀಲಿಂಗ್ ಶೋಕಿಗೆಂದೆ ಬೈಕ್ ಗಳನ್ನು ಕಳುವು ಮಾಡುತ್ತಿದ್ದ ಇಬ್ಬರು ಯುವಕರು ಈಗ ಕಂಬಿ ಎಣಿಸುತ್ತಿದ್ದಾರೆ.
ಕುವೆಂಪುನಗರ ಠಾಣಾ ಪೊಲೀಸರು ಧನುಷ್ (19) ಹಾಗೂ ನಿತಿನ್ (19) ಎಂಬಯುವಕರನ್ನು ಬಂಧಿಸಿ 2.5 ಲಕ್ಷ ಮೌಲ್ಯದ 4 ಬೈಕ್ ಗಳನ್ನ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಶ್ರೀರಾಂಪುರದಲ್ಲಿ ಹೀರೋ ಹೋಂಡಾ ಸಿಡಿ ಡಾನ್ ಬೈಕ್ ಕಳುವು ಮಾಡಿ ಅದೇ ಬೈಕ್ ನಲ್ಲಿ ಸುತ್ತಾಡುತ್ತಾ ಮತ್ತೊಂದು ಬೈಕ್ ಕಳುವು ಮಾಡಲು ಸಂಚು ಹಾಕುತ್ತಿದ್ದ ವೇಳೆ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ವಿಚಾರಣೆಗೆ ವೇಳೆ ವ್ಹೀಲಿಂಗ್ ಶೋಕಿಗಾಗಿ ಬೈಕ್ ಗಳನ್ನ ಕಳುವು ಮಾಡುತ್ತಿದ್ದೆವೆಂದು ಬಾಯಿಬಿಟ್ಟಿದ್ದಾರೆ.
ಆರೋಪಿಗಳ ಬಂಧನ ದಿಂದ
ವಿದ್ಯಾರಣ್ಯಪುರಂ ಠಾಣೆ,ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಕಳವು ಪ್ರಕರಣ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳು ಪತ್ತೆಯಾಗಿದೆ.
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ಉಪವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪಿಎಸ್ಸೈ ಗಳಾದ ಕು.ರಾಧಾ,ಗೋಪಾಲ್, ಸಿಬ್ಬಂದಿಗಳಾದ ಆನಂದ್,ಮಂಜುನಾಥ್,ಪುಟ್ಟಪ್ಪ,ಹಜರತ್,ಸುರೇಶ್,ನಾಗೇಶ್,ಯೋಗೇಶ್,ಸತೀಶ್ ಅವರು ದಾಳಿ ವೇಳೆ ಭಾಗವಹಿಸುದ್ದರು.
ನಗರ ಪೊಲೀಸ್ ಆಯುಕ್ತರಾದ ಡಾ.ಬಿರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ರವರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.