ಎಸ್ ಸಿ ಎಸ್‌ ಪಿ- ಟಿ ಎಸ್‌ ಪಿ ಕಾಯ್ದೆಯ ನಿಯಮ ಮೀರಿಲ್ಲ: ಹೆಚ್. ಸಿ ಮಹದೇವಪ್ಪ

ಬೆಂಗಳೂರು: ಎಸ್ ಸಿ ಎಸ್‌ ಪಿ ಮತ್ತು ಟಿ ಎಸ್‌ ಪಿ ಕಾಯ್ದೆಯ ನಿಯಮ ಮೀರಿಲ್ಲ ಎಂದು ಸಚಿವ ಹೆಚ್. ಸಿ ಮಹದೇವಪ್ಪ ಅವರು‌ ಸ್ಪಷ್ಟಪಡಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಿದ್ದ ಹಣವನ್ನು ಈ ಹಿಂದಿನ ಬಿಜೆಪಿ ಸರ್ಕಾರ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಬೇರೆ ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿತ್ತು‌ ಎಂದು ದೂರಿದ್ದಾರೆ

ಬಿಜೆಪಿ ನಾಯಕರು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನಮ್ಮ ಸರ್ಕಾರದ ಬಗ್ಗೆ ಟೀಕಿಸುತ್ತಿರುವುದು
ವಿಪರ್ಯಾಸ ಎಂದು ಕಿಡಿಕಾರಿದ್ದಾರೆ.

ಗ್ಯಾರಂಟಿ ಯೋಜನೆಗಾಗಿ ಎಸ್ ಸಿ ಎಸ್‌ ಪಿ ಮತ್ತು ಟಿ ಎಸ್‌ ಪಿ ಕಾಯ್ದೆಯಡಿ ಭಾಗಶಃ ಅನುದಾನವನ್ನು ನೀಡಲಾಗಿದ್ದು, ಎಲ್ಲಿಯೂ ನಿಯಮಾವಳಿಗಳನ್ನು ಮೀರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.