ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಭರದಿಂದ ಸಿದ್ದತೆ ಆರಂಭವಾಗಿದೆ.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಆಯ್ಕೆ ಪ್ರಕ್ರಿಯೆ ಕೂಡಾ ಪ್ರಾರಂಭವಾಗಿದೆ.
ನಾಗರಹೊಳೆ, ಬಂಡೀಪುರದ ವಿವಿಧ ಆನೆ ಕ್ಯಾಂಪ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರು ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ಅಧಿಕಾರಿಗಳು
ಬಳ್ಳೆ ರಾಂಪುರ ಆನೆ ಶಿಬಿರದಲ್ಲಿ ದಸರಾ ಆನೆಗಳ ಪರಿಶೀಲನೆ ನಡೆಸಿದ್ದಾರೆ.
ಅರ್ಜುನ ಈ ಬಾರಿಯೂ ದಸರೆಯಲ್ಲಿ ಭಾಗವಹಿಸುವುದು ಖಚಿತವಾಗಿದೆ.
ಅರ್ಜುನ ದಸರಾ ಜಂಬೂಸವಾರಿ ಮಾಜಿ ಕ್ಯಾಪ್ಟನ್ ಆಗಿದ್ದು,ಅವನಿಗೆ ನಿಶಾನೆ ಆನೆ ಗೌರವ ನೀಡಲಾಗಿದೆ.