ದ್ವಿಚಕ್ರ ವಾಹನ ಸವಾರರಿಗೆ ದೇವರಾಜ ಠಾಣೆ ಪೊಲೀಸರಿಂದ ಜಾಗೃತಿ

ಮೈಸೂರು: ದ್ವಿಚಕ್ರ ವಾಹನ ಸವಾರರಿಗೆ ನಗರದ ದೇವರಾಜ ಸಂಚಾರಿ ಠಾಣೆ ಪೊಲೀಸರು ಚಾಲನೆ ವೇಳೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ದ್ವಿಚಕ್ರ ವಾಹನ ಚಾಲನೆ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಾಹನ ಸವಾರರು ಡಿ.ಎಲ್.ಹೊಂದಿರಬೇಕು,ಆರ್.ಸಿ.ಕಾರ್ಡ್ ಪಡೆದಿರಬೇಕು,ವಿಮೆ ಚಾಲನೆಯಲ್ಲಿರಬೇಕು,ಸೈಡ್ ಮಿರರ್ ಅಳವಡಿಸಿರಬೇಕು, ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವುದು ಸೇರಿದಂತೆ ಇತರ ನಿಯಮಗಳ ಬಗ್ಗೆ ತಿಳುವಳಿಕೆ‌ ಹೇಳಿದರು.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಂತೆ ದೇವರಾಜ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಮುನಿಯಪ್ಪ ನೇತೃತ್ವದಲ್ಲಿ ಅರಿವು ಮೂಡಿಸಲಾಯಿತು.