ಮೈಸೂರು: ಯಾರಿಗೂ ಉಪದ್ರವ ಕೊಡದ ತಮ್ಮ ಪಾಡಿಗೆ ಸ್ವಚ್ವಂದವಾಗಿ ಮಕ್ಕಳೊಂದಿಗೆ ಹಾರಾಡಿಕೊಂಡಿದ್ದ ಪಾಪದ ಪಕ್ಷಿ ಮತ್ತು ಮರಿಗಳನ್ನು ಪಾಪಿಯೊಬ್ಬ ಪೈಶಾಚಿಕವಾಗಿ ಕೊಂದು ಹಾಕಿದ್ದಾನೆ.
ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಮರ ಒಂದರಲ್ಲಿ ಕಾರ್ಮೋರೆಂಟ್ ಹಾಗೂ ಈಗ್ರೇಟ್ ಜಾತಿಯ ಪಕ್ಷಿಗಳು ಗೂಡು ಕಟ್ಟಿ ಮರಿಗಳನ್ನು ಮಾಡಿ ಆನಂದದ ಜೀವನ ಸಾಗಿಸುತ್ತಿದ್ದವು.
ಅದೇ ಗ್ರಾಮದ ರವಿ ಎಂಬ ಕಿರಾತಕ ಪಕ್ಷಿಗಳ ಗೂಡನ್ನು ಕಿತ್ತು ಹಾಕಿ 24 ಮರಿಗಳನ್ನು ಸಾಯಿಸಿ 7 ಮರಿಗಳನ್ನು ಗಾಯಗೊಳಿಸಿದ್ದಾನೆ.
ಇದೀಗ ಗಾಯಗೊಂಡ ಮರಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ಆರೋಪಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ ಎಫ್ ಒ ಸುರೇಂದ್ರ. ಕೆ, ಡಿ ಆರ್ ಎಫ್ ಒ ಮೋಹನ್ ಕುಮಾರ್, ಗಸ್ತು ಪಾಲಕ ರಾಜೇಗೌಡ, ಚಾಲಕ ಗಣೇಶ ಭಾಗವಹಿಸಿದ್ದರು.
ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.