ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ

ನವದೆಹಲಿ: ಮಣಿಪುರದ ವಿಚಾರವಾಗಿ ಸದನದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ಭಾರತ ಮಾತೆಯ ಹಂತಕರು ಎಂದು  ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತ ಒಂದು ಧ್ವನಿಯಾಗಿದೆ, ಅದು ಹೃದಯದ ಧ್ವನಿ. ನೀವು ಮಣಿಪುರದಲ್ಲಿ ಆ ಧ್ವನಿಯನ್ನು ಕೊಂದಿದ್ದೀರಿ, ನೀವು ದೇಶದ್ರೋಹಿಗಳು ಎಂದು ಕಿಡಿಕಾರಿದರು.

ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ನನಗೆ ಇನ್ನೊಂದು ತಾಯಿ ಭಾರತ ಮಾತಾ. ನೀವು ಮಣಿಪುರದಲ್ಲಿ ಅವಳನ್ನು ಕೊಂದಿದ್ದೀರಿ. ಆದ್ದರಿಂದಲೇ ಪ್ರಧಾನಿ ಮೋದೀಜಿ ಮಣಿಪುರಕ್ಕೆ ಭೇಟಿ ನೀಡುವುದಿಲ್ಲ ಎಂದು ದೂರಿದರು.

ಪ್ರಧಾನಿ ಅವರು ಮಣಿಪುರಕ್ಕೆ ಹೋಗಿಲ್ಲ, ಅದನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ,ಬಿಜೆಪಿ ಯವರು ಮಣಿಪುರವನ್ನು ವಿಭಜಿಸಿದ್ದೀರಿ ಎಂದು ಆರೋಪಿಸಿದರು.

ನೀವು ಎಲ್ಲೆಡೆ ಸೀಮೆಎಣ್ಣೆ ಎರಚಿದ್ದೀರಿ, ನೀವು ಮಣಿಪುರಕ್ಕೆ ಬೆಂಕಿ ಹಚ್ಚಿದ್ದೀರಿ, ನೀವು ಈಗ ಹರಿಯಾಣದಲ್ಲಿ ಅದೇ ಪ್ರಯತ್ನ ಮಾಡುತ್ತಿದ್ದೀರಿ.

ಈ ದೇಶವು ದುರಹಂಕಾರವನ್ನು ಸಹಿಸುವುದಿಲ್ಲ. ಕೆಲವೇ ದಿನಗಳಲ್ಲಿ, ಹಳೆಯ ಗಾಯವು ಮರುಕಳಿಸಿದೆ.

ಮಣಿಪುರ ಎರಡು ಹೋಳಾಗಿದೆ. ಸರ್ಕಾರದ ರಾಜಕೀಯ ಮಣಿಪುರದಲ್ಲಿ ಭಾರತವನ್ನು ಕೊಲೆ ಮಾಡಿದೆ ಎಂದು ರಾಹುಲ್‌ ಟೀಕಿಸಿದರು.

ಮಣಿಪುರದ ಜನರನ್ನು ಕೊಲ್ಲುವ ಮೂಲಕ, ನೀವು ಭಾರತ ಮಾತೆಯ ಹಂತಕರಾಗಿದ್ದೀರಿ ಎಂದು ರಾಹುಲ್ ಗುಡುಗಿದರು.