ರಸ್ತೆ ಬದಿ ಹಸಿರು ಹುಲ್ಲು ಕೊಯ್ದು ಗೋಶಾಲೆಗೆ ನೀಡಿ ಪೇಜಾವರಶ್ರೀ ಸಲಹೆ

ಮೈಸೂರು:‌ ಮಳೆಯಾಗಿರುವುದರಿಂದ ಶಾಲೆ, ಕಚೇರಿಗಳ ಆವರಣ, ತೋಟಗಳು, ರಸ್ತೆ ಬದಿಗಳಲ್ಲಿ ಸಮೃದ್ಧ ಹಸಿರು ಹುಲ್ಲು ಬೆಳೆದಿದೆ. ಇದು ಪೋಲಾಗದಂತೆ ಕೊಯ್ದು ಗೋಶಾಲೆಗಳಿಗೆ ನೀಡಿದರೆ ಒಳಿತು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶಿಸಿದ್ದಾರೆ.

ಈ ಹುಲ್ಲನ್ನು ಊರಿನ ಸಂಘಟನೆಗಳು, ಯುವಕ ಮಂಡಲಿಗಳು, ಸ್ವಯಂಸೇವಾ ಸಂಸ್ಥೆ, ಭಜನಾ ಮಂಡಳಿಗಳ ಸದಸ್ಯರು ವಾರಕ್ಕೊಂದು ದಿನ ಕನಿಷ್ಠ ಒಂದು ಘಂಟೆ ಶ್ರಮದಾನದ ಮೂಲಕ ಕಟಾವ್ ಮಾಡಿ ಸಮೀಪದ ಗೋಶಾಲೆಗಳು, ಮಠ ದೇವಸ್ಥಾನಗಳಲ್ಲಿರುವ ಹಸುಗಳಿಗೆ ನೀಡುವಂತಾಗಲಿ ಎಂದು ಸಲಹೆ ನೀಡಿದ್ದಾರೆ.

ಹುಲ್ಲನ್ನು ರವಾನಿಸಲು ಊರಿನ ಯಾರಾದರೂ ಸಹೃದಯ ದಾನಿಗಳ ನೆರವು ಪಡೆಯಬಹುದು, ಇದರಿಂದಾಗಿ ರಸ್ತೆಬದಿ, ತೋಟ ಇತ್ಯಾದಿ ಸ್ವಚ್ಛತೆಯೂ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜೊತೆಗೆ ಗೋಶಾಲೆಗಳಲ್ಲಿನ ಗೋವುಗಳಿಗೆ ಸಮೃದ್ಧ ಹಸಿರು ಹುಲ್ಲು ಒದಗಿಸಿದ ಪುಣ್ಯವೂ ನಮ್ಮದಾಗುತ್ತದೆ ಎಂದ ಶ್ರೀಗಳು ಹೇಳಿದ್ದಾರೆ.

ಈಗಾಗಲೇ ಕೆಲವು ಕಡೆಗಳಲ್ಲಿ ಗೋವಿಗಾಗಿ ಮೇವು ಅಭಿಯಾನ ನಡೆಯುತ್ತಿವೆ.

ಗೋರಕ್ಷಣೆಯ ಕಾರ್ಯದಲ್ಲಿ ಈ ಮೂಲಕವೂ ಎಲ್ಲರೂ ತೊಡಗಿಕೊಳ್ಳಬಹುದಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.