ಮತ್ತಿಗೋಡು ಶಿಬಿರದಲ್ಲಿ ಆನೆ ಸುಬ್ರಮಣಿ
ಸಾವು

ಮೈಸೂಸೂರು: ಹುಣಸೂರು ಸಮೀಪದ ಆನೆಚೌಕೂರಿನ ಮತ್ತಿಗೂಡು ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದ್ದ ಆನೆ ಸಾವನ್ನಪ್ಪಿದೆ.

ನಾಗರಹೊಳೆ ಅರಣ್ಯ ಪ್ರದೇಶದ ಆನೆಚೌಕೂರಿನ ಮತ್ತಿಗೂಡು ಸಾಕಾನೆ 50 ವರ್ಷದ ಸುಭ್ರಮಣಿ ಎಂಬ ಆನೆ ಮೃತಪಟ್ಟಿದೆ.

ಶಿಬಿರದಿಂದ ಹೊರಗಡೆ ಸುಭ್ರಮಣಿ ಪಳಗಿಸುವ ವೇಳೆ ನಿತ್ರಾಣವಾಗಿ ಬಿದ್ದಿದ್ದಾನೆ.
ತಕ್ಷಣ ಪಶು ವೈದ್ಯಾಧಿಕಾರಿಗಳು ಅಗತ್ಯ ಚಿಕಿತ್ಸೆ ನೀಡಿದ್ದಾರೆ.

ಅತಿಯಾಗಿ ಬಳಲಿದ್ದ ಸುಬ್ರಮಣಿಯನ್ನ ಕ್ರೇನ್ ಸಹಾಯದಿಂದ ನಿಲ್ಲಿಸಲು ಯತ್ನಿಸಿದ್ದಾರೆ.ಆದರೆ ಆತನಿಗೆ ಏಳಲಾಗಿಲ್ಲ.

ಆರ್ಥರೈಟೀಸ್ ನಿಂದ ಬಳಲುತ್ತಿದ್ದ ಸುಭ್ರಮಣಿ ಸೋಂಕಿನಿಂದ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರ್ಷಕುಮಾರ್ ಚಿಕ್ಕನರಗುಂದ,ದಯಾನಂದ್,ಪಶುವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.