ಮೈಸೂರು: ಮೈಸೂರಿನ ವಾರ್ಡ್ ನಂಬರ್ 65ರ ವ್ಯಾಪ್ತಿಯ ಶ್ರೀರಾಂಪುರ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕೆಂದು ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದರು.
ಕೆ.ಆರ್ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಸೋಮವಾರ ಬೆಳಗ್ಗೆ ಪಾದಯಾತ್ರೆ ಕೈಗೊಂಡ ವೇಳೆ ನಾಯಿಗಳ ಹಾವಳಿ ಬಗ್ಗೆ ಜನ ಗಮನ ಸೆಳೆದರು.
ಶಾಸಕರು ನಾಯ್ಡು ಸ್ಟೋರ್ ಬಳಿ ಇರುವ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಶ್ರೀರಾಂಪುರ
ಬಡಾವಣೆಯಲ್ಲಿ ಪಾದಯಾತ್ರೆ ಕೈಗೊಂಡರು.
ಕಾರ್ಯಕರ್ತರು, ಅಧಿಕಾರಿಗಳು,ಹಾಗೂ ನಗರಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗಾನಂದ ರವರೊಂದಿಗೆ ಜನರ ಸಮಸ್ಯೆಗಳನ್ನು ಆಲಿಸಿದರು.ಈ ವೇಳೆಪ್ರಮುಖವಾಗಿ ನಾಯಿ ಹಾವಳಿ ಬಗ್ಗೆ ಜನ ದೂರಿದರು.
ಗಣಪತಿ ದೇವಸ್ಥಾನದ ಹಿಂಭಾಗ ಇರುವ ಒಂದನೇ ಕ್ರಾಸ್, ಎರಡನೇ ಕ್ರಾಸ್, ಮೂರನೇ ಕ್ರಾಸ್ ಸೇರಿದಂತೆ ಎಲ್ಲಾ ಕ್ರಾಸ್ ಗಳಲ್ಲಿ ಒಳಚರಂಡಿ ಸಮಸ್ಯೆ ಇದ್ದು ಸರಿಪಡಿಸಿಕೊಡುವಂತೆ ಸ್ಥಳೀಯರು ಕೋರಿದರು.
ಸ್ಯಾನಿಟರಿ ನೀರು ಮನೆ ಒಳಗೆ ನುಗ್ಗುತ್ತದೆ ಈ ಕೆಲಸ ಅವೈಜ್ಞಾನಿಕವಾಗಿದ್ದು ಕೂಡಲೇ ಈ ಭಾಗದ ಜನರ ಸಮಸ್ಯೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಆದೇಶಿಸಿದರು.
ಶ್ರೀರಾಂಪುರ, ಕುವೆಂಪು ನಗರ, ಜಯನಗರ ಭಾಗದ ಜನರಿಗೆ ರೈಲ್ವೆ ಸ್ಟೇಷನ್ ಮತ್ತು ಬಸ್ ನಿಲ್ದಾಣಗಳಿಗೆ ಹೋಗಲು ನೇರ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಜನ ಮನವಿ ಮಾಡಿದರು
ಶ್ರೀರಾಂಪುರ 9ನೇ ಕ್ರಾಸ್ ಮತ್ತು10 ನೇ ಕ್ರಾಸ್ ನ ಸುತ್ತ ಮುತ್ತಲು ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನ ಓಡಾಡಲು ಭಯಪಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಪಾಲಿಕೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಶ್ರೀವತ್ಸ ಭರವಸೆ ನೀಡಿದರು.ಈ ವೇಳೆ ಗಿರೀಶ್, ಮನೋಜ್, ಜಯರಾಂ, ಮನೋಜ್, ಮಂಜುನಾಥ್, ಸತೀಶ್, ಪಾಪಣ್ಣ, ಭರತ್, ಚೇತನ್, ಬಿ.ಕೆ.ಮಂಜುನಾಥ, ಸುವರ್ಣ,ಜಯಂತಿ,ಶೋಭ,ಅಶೋಕ,ಜಗದೀಶ್, ಸಿದ್ದರಾಜು,ಜಗ್ಗ,ಶಿವಾನಂದ, ಜೋಗಿ ಮಂಜು, ಪ್ರದೀಪ್, ಕಿಶೋರ್, ಶಿವರಾಜ್ ಹಾಜರಿದ್ದರು.