ಮೈಸೂರು: ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಕೇಂದ್ರದ ಸದಸ್ಯರು ಆವರಣದಲ್ಲಿ ಭಾರತದ ಚಿತ್ರ ಬಿಡಿಸಿ, ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸಲಾಯಿತು
ಭಾರತಮಾತೆ ಚಿತ್ರಕ್ಕೆ ಅಲಂಕಾರ ಮಾಡಿ ರಾಷ್ಟ್ರಧ್ವಜಗಳನ್ನು ಹಿಡಿದುಕೊಂಡು ಪುಷ್ಪನಮನ ಸಲ್ಲಿಸಿದರು.
ನಂತರ ಸಿಹಿ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರೂಪದರ್ಶಿ ತನಿಷ್ಕಮೂರ್ತಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಮುತ್ತಣ್ಣ, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ,ರಶ್ಮಿ, ಸೂರಜ್, ಸದಾಶಿವ, ಮತ್ತಿತರರು ಪಾಲ್ಗೊಂಡಿದ್ದರು.