ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ದೇಣಿಗೆ ನೀಡಿ ಸ್ವಾತಂತ್ರ್ಯೋತ್ಸವ ಆಚರಿಸಿದ ಲಯನ್ಸ್ಕ್ಲಬ್ ಗಂಗೋತ್ರಿ

ಮೈಸೂರು: ಲಯನ್ಸ್  ಕ್ಲಬ್ ಗಂಗೋತ್ರಿ ವತಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ದೇಣಿಗೆ ನೀಡುವ‌ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಸಾಮಾನ್ಯವಾಗಿ ‌ಸಂಘ,ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆಯನ್ನು ತಮ್ಮ ಸಂಸ್ಥೆಗಳ ಮುಂದೆ‌‌ ಅಥವಾ ಆವರಣದಲ್ಲಿ ಹಮ್ಮಿಕೊಳ್ಳುತ್ತವೆ.

ಆದರೆ ಲಯನ್ಸ್  ಕ್ಲಬ್ ಗಂಗೋತ್ರಿ ಸದಸ್ಯೆಯರು ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಚಾಮುಂಡಿ  ಚಿಲ್ಡ್ರನ್ಸ್ ಹೋಂ ಶಿಕ್ಷಣ ಸಂಸ್ಥೆ ಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದುದು ವಿಶೇಷ.

ಲಯನ್ಸ್  ಕ್ಲಬ್ ಗಂಗೋತ್ರಿಯ ಸದಸ್ಯೆಯರು  ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡಿ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದರು.

ನಂತರ ಮಕ್ಕಳ ಶಿಕ್ಷಣಕ್ಕಾಗಿ  ಸಂಸ್ಥೆಯ  ಗೌರವ ಕಾರ್ಯದರ್ಶಿ ರಘೋತ್ತಮ ರಾವ್ ರವರಿಗೆ 5,000 ರೂ ದೇಣಿಗೆಯನ್ನು ಸಂಸ್ಥೆಯ ಅಧ್ಯಕ್ಷೆ ಲಯನ್ ಮಾಲಾ ಚಂದ್ರಶೇಖರ್ ರವರು ನೀಡಿದರು.

ಈ ವೇಳೆ ಕ್ಲಬ್ ನ ಸದಸ್ಯರಾದ ಗಾಯತ್ರಿ ಜಗದೀಶ್,ಉಮಾ ಬಾಬು, ಕಲಾವತಿ, ಪ್ರೀತಿ ಮತ್ತಿತರರು ಹಾಜರಿದ್ದರು.