ಪುಸ್ತಕ, ಪೆನ್ನು ಹಿಡಿಯುವ ಕೈಗಳಲ್ಲಿ ಮಾರಕಾಸ್ತ್ರಗಳು -ಇಬ್ಬರು ವಿದ್ಯಾರ್ಥಿಗಳು ಅಂದರ್

ಮೈಸೂರು: ಮಾರಕಾಸ್ತ್ರಗಳನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ.ಶಾಲಾ ಕಾಲೇಜುಗಳಲ್ಲಿ ಓದಿ ಮುಂದೆ ಬರಬೇಕಾದ ವಿದ್ಯಾರ್ಥಿಗಳಿಗೆ ಇವು ಹೇಗೆ ಸಿಗುತ್ತವೊ ತಿಳಿಯದು.

ಪುಸ್ತಕ, ಪೆನ್ನು ಹಿಡಿಯುವ ಕೈಗಳಲ್ಲಿ ಮಾರಕಾಸ್ತ್ರಗಳು!ಹೀಗೆ‌ ಮಾರಕಾಸ್ತ್ರ ಹೊಂದಿದ್ದ ಇಬ್ಬರು ವಿದ್ಯಾರ್ಥಿಗಳು ಕಂಬಿ‌ ಎಣಿಸುತ್ತಿದ್ದಾರೆ.

ಮೈಸೂರಿನ ಕುವೆಂಪು ನಗರ ಠಾಣಾ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿ, ಎರಡು ಲಾಂಗ್ ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ

ರಾಮಕೃಷ್ಣನಗರದ ಸಮರ್ಥ (25), ಉತ್ಸವ್ (19) ಬಂಧಿತ ವಿದ್ಯಾರ್ಥಿಗಳು.

ಸ್ನೇಹಿತರನ್ನು ಹೆದರಿಸಲು ಲಾಂಗ್ ಇಟ್ಟುಕೊಂಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ಕ್ರಿಕೆಟ್ ಆಟ ಆಡುವ ವಿಚಾರದಲ್ಲಿ ಸ್ನೇಹಿತರಲ್ಲೇ ಎರಡು ಗುಂಪುಗಳಾಗಿದ್ದು,ಇದೇ ವಿಚಾರದಲ್ಲಿ ಗಲಾಟೆ ಕೂಡಾ ಮಾಡುಕೊಂಡಿದ್ದಾರೆ.

ಆರೋಪಿಗಳು ಸ್ನೇಹಿತರನ್ನು ಹೆದರಿಸಲು ಲಾಂಗ್ ಇಟ್ಟುಕೊಂಡಿದ್ದಾಗಿ ಹೇಳಿದ್ದಾರೆ.

ಕುವೆಂಪು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.