ಮೈಸೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ
ಜಿಲ್ಲೆಯ ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ನಡೆದಿದೆ.
2ನೇ ತರಗತಿಯ ಅನೂಷ ಎಂಬ ಬಾಲಕಿಯನ್ನು ಶನಿವಾರ ದುಷ್ಕರ್ಮಿಗಳು ಅಪಹರಿಸಲು ಯತ್ನಿಸಿದ್ದು ಶಾಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು.
ವಿದ್ಯಾರ್ಥಿನಿ ಶೌಚಾಲಯಕ್ಕೆ ತೆರಳಿದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಲು ಯತ್ನಿಸಿದ್ದಾರೆ.
ಬಾಲಕಿ ಭಯದಲ್ಲಿ ಕಿರುಚಾಡಿದ್ದಾಳೆ,ಆಕೆಯ ಕಿರುಚಾಟ ಕೇಳಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಧಾವಿಸಿದ್ದಾರೆ.
ತಕ್ಷಣ ಅಪರಿಚಿತರು ಬಾಲಕಿಯನ್ನ ಅಲ್ಲೇ ಬಿಟ್ಟು ಓಡಿಹೋಗಿದ್ದಾರೆ.
ಜಯ ಕರ್ನಾಟಕ ಸಂಘಟನೆಯ ಹೋಬಳ ಅಧ್ಯಕ್ಷ ಜವರ ನಾಯಕ ಈ ಘಟನೆಯನ್ನ ಖಂಡಿಸಿದ್ದಾರೆ.
ಶಾಲೆಯ ಹಿಂಭಾಗ ಕಾಂಪೌಂಡ್ ಸಂಪೂರ್ಣ ಶಿಥಿಲ ಗೊಂಡಿದೆ, ಅತಿ ಹೆಚ್ಚು ಗಿಡಗಂಟೆಗಳು ಮರಗಳು ಇದ್ದು ಕಾಡಿನಂತಾಗಿದೆ,ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ಕೂಡಲೆ ಗಿಡಗಂಟೆಗಳನ್ನು ತೆರೆವುಗೊಳಿಸಿ ಕಾಂಪೌಂಡ್ ನಿರ್ಮಿಸಿ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.