ಮೈಸೂರು: ಕ್ಷುಲ್ಲಕ ಕಾರಣಕ್ಕೆ ಮೈಸೂರಿನಲ್ಲಿ ಸ್ನೇಹಿತರೇ ಯುವಕನೊಬ್ಬನ್ನು ಕೊಲೆ ಮಾಡಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಬಾಲರಾಜ್ (28) ಕೊಲೆಯಾಗಿರುವ ಯುವಕ.
ಈತ ಮೈಸೂರು ರೇಸ್ ಕೋರ್ಸ್ ಬುಕ್ಕಿಯ ಜೊತೆ ಕೆಲಸ ಮಾಡುತ್ತಿದ್ದ.
ವಿದ್ಯಾನಗರ ಬಡಾವಣೆಯ ನಾಲ್ಕನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು,
ನಾಲ್ಕು ಮಂದಿ ಬಾಲರಾಜ್ ನನ್ನು ಕೊಲೆ ಮಾಡಿದ್ದಾರೆ.
ಈ ಪ್ರಕರಣ ಸಂಬಂಧ ತೇಜಸ್, ಸಂಜಯ್, ಕಿರಣ್, ಸಾಮ್ರಾಟ್ ಎಂಬುವರ ವಿರುದ್ದ ಎಫ್ ಐ ಆರ್. ದಾಖಲಾಗಿದೆ.
ಚಿಕ್ಕ ವಯಸ್ಸಿನಿಂದ ಕೊಲೆಯಾಗಿರುವ ಬಾಲರಾಜ್ ಹಾಗೂ ಆರೋಪಿಗಳು ಸ್ನೇಹಿತರು. ಜತೆಗೆ ಎಲ್ಲರೂ ಒಂದೇ ರಸ್ತೆ ನಿವಾಸಿಗಳು.
ಶನಿವಾರ ಕ್ಷುಲ್ಲಕಕಾರಣಕ್ಕೆ ಇವರುಗಳ ನಡುವೆ ಜಗಳ ಆರಂಭವಾಗಿದೆ.ಬೇಕೆಂದೇ ಬಾಲರಾಜ್ ಮನೆ ಮುಂದೆ ಬಂದು ಆರೋಪಿಗಳು ಕ್ಯಾತೆ ತೆಗೆದಿದ್ದಾರೆ.
ಜಗಳ ನಡೆಯುತ್ತಿದ್ದಾಗ ಮೃತನ ತಂದೆ ಜಗಳ ಬಿಡಿಸಲು ಯತ್ನಿಸಿದ್ದಾರೆ.ಆದರೆ ಆರೋಪಿಗಳು ಬಾಲರಾಜನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡಿದ್ದ ಬಾಲರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಜರ್‌ಬಾದ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.