ಬೆಳಗಾವಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿಯನ್ನು ಪತ್ನಿ ಕೊಲೆ ಮಾಡಿರುವ ಘಟನೆ ನಿಪ್ಪಾಣಿ ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಮನೆಯಲ್ಲಿ ಎಮ್ಮೆಯ ಕರು ಸತ್ತಿದೆ ಎಂದು ಜೆಸಿಬಿ ಯಂತ್ರದ ಮೂಲಕ ಮನೆ ಆವರಣದಲ್ಲಿ ಕಳ್ಳ ತೆಗೆಸಿ ಅಲ್ಲಿ ಪತಿಯ ಶವ ಹೂತು ಹಾಕಿದ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕು ಹಂಚನಾಳ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರ ಕೊಲ್ಲಾಪೂರ ಜಿಲ್ಲೆಯ ಕಾಗಲ ತಾಲೂಕಿನ ನೇರ್ಲಿ ಗ್ರಾಮದ ಸಚಿನ ಸದಾಶಿವ ಭೋಪಳೆ (35) ಪತ್ನಿಯಿಂದ ಕೊಲೆಯಾದ ಪತಿ.
ಪತ್ನಿ ಅನಿತಾ ಕೊಲೆ ಮಾಡಿ ಪರಾರಿ ಆಗಿದ್ದಾಳೆ.
ಘಟನೆ ವಿವರ: ಪತಿ ಸಚಿನ ಹಾಗೂ ಪತ್ನಿ ಅನಿತಾ ನಡುವೆ ಆಗಾಗ ಅಕ್ರಮ ಸಂಬಂಧದ ಬಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದು ವಿಕೋಪ ತಿರುಗಿ ಪತ್ನಿ ದೊಣ್ಣೆಯಿಂದ ಹೊಡೆದು ಪತಿಯನ್ನು ಸಾಯಿಸಿದ್ದಾಳೆ.
ನಂತರ ಆಕೆ ತಮ್ಮ ಮನೆಯಲ್ಲಿ ಎಮ್ಮೆಯ ಕರು ಸತ್ತಿದೆ ಎಂದು ಹೇಳಿ ಜೆಸಿಬಿ ಚಾಲಕನನ್ನು ಕರೆಸಿ ಮನೆಯಲ್ಲಿ ಹಳ್ಳ ತೆಗೆಸಿದ್ದಾಳೆ.
ನಂತರ ಆ ಹಳ್ಳದಲ್ಲಿ ಗಂಡನ ಶವವನ್ನು ಹೂತು ಹಾಕಿದ್ದಾಳೆ.
ಮೂರು ದಿನಗಳ ನಂತರ ಸಚಿನ ಕಾಣದೇ ಇದ್ದಾಗ ಸಂಶಯಗೊಂಡ ಜೆಸಿಬಿ ಚಾಲಕ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೆÇಲೀಸರು ಮತ್ತು ಕಂದಾಯ ಅಧಿಕಾರಿಗಳು ಅನಿತಾಳ ಮನೆಯಲ್ಲಿನ ಆವರಣದಲ್ಲಿನ ಹಳ್ಳ ತೆರೆದಾಗ ಸಚಿನ ಅವರ ಶವ ಪತ್ತೆ ಆಗಿದೆ.
ಅನಿತಾಳಿಗೆ ಸಹಾಯ ಮಾಡಿದ ಸಹೋದರ ಕೃಷ್ಣಾ ಘಾಟಗೆ, ಸಹೋದರಿ ವನಿತಾ ಸೇರಿ ಮೂವರು ತಲೆ ಮರೆಯಿಸಿಕೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ನಿಪ್ಪಾಣಿ ಗ್ರಾಮೀಣ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.