ಜೀವದಾರ ರಕ್ತ ನಿಧಿ ಕೇಂದ್ರಕ್ಕೆ ಆರೋಗ್ಯ ಸಚಿವ ಗುಂಡೂರಾವ್ ಪ್ರಶಂಸೆ

ಮೈಸೂರು: ಮೈಸೂರು ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯಕೀಯ ಸಚಿವ ದಿನೇಶ್ ಗುಂಡೂರಾವ್ ಪ್ರಶಂಸಿಸಿದ್ದಾರೆ.

ಜತೆಗೆ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರಿಗೆ ಪ್ರಶಂಸಾ ಫಲಕ ಹಾಗೂ ಪತ್ರ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಬೆಂಗಳೂರಿನ ಯಶವಂತಪುರದ ಸ್ಪರ್ಶ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಲಡ್ ಬ್ಯಾಂಕ್ ನ ಬ್ಲಡ್ transfusion ಮೆಡಿಸಿನ್ ವಿಷಯದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಸಮ್ಮೇಳನದಲ್ಲಿ

ದಿನೇಶ್ ಗುಂಡೂರಾವ್ ‌ಅವರು ಪ್ರಶಂಸಾ ಫಲಕ, ಪತ್ರ ವಿತರಿಸಿದರು.

ಇನ್ನೂ ಹೆಚ್ಚು ಜನರಿಗೆ ಉಪಯೋಗವಾಗಲಿ ನಿಮ್ಮಿಂದ‌ ಎಂದು ‌ಸಚಿವರು ಪ್ರೋತ್ಸಾಹಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ರಕ್ತ ಸಂಚಲನ ಪರಿಷತ್ ಇಲಾಖೆಯ ಯೋಜನಾ ನಿರ್ದೇಶಕ ನಾಗರಾಜ್, ಇಂಡಿಯನ್ ಅಸೋಸಿಯೇಷನ್ ಆಫ್ ಬ್ಲಡ್ ಬ್ಯಾಂಕ್ ಅಧ್ಯಕ್ಷ ಲಯನ್ ಎಸ್ ಮನೋಜ್ ಕುಮಾರ್, ಕರ್ನಾಟಕ ರಾಜ್ಯ ಔಷಧಿ ನಿಯಂತ್ರಕ ಬಾಗೂಜಿ ಟಿ ಖಾನಾಪೂರೆ, ಡಾಕ್ಟರ್ ಜೈ ರಾಜ್, ಗಿರೀಶ್ ಬುಡರಕಟ್ಟಿ, ಮತ್ತಿತರರು ಹಾಜರಿದ್ದರು.