ಬಾಂಧವ್ಯ ಬೆಸೆಯುವ ಪಂಚಮಿ ಹಬ್ಬ: ಪ್ರಮೀಳಾ ಭರತ್

ಮೈಸೂರು: ನಾಗರ ಪಂಚಮಿ ಹಬ್ಬವು ಧಾರ್ಮಿಕ ನಂಬಿಕೆಯ ಜೊತೆಗೆ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಎಂದು ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಹೇಳಿದರು.

ನಾಗದೇವತೆ ಆರಾಧನೆಯೊಂದಿಗೆ ನಿಸರ್ಗದ ಪ್ರಾಣಿ , ಪಕ್ಷಿ ಸಂಕುಲವನ್ನು ಆರಾಧಿಸುವ ಮೂಲಕ ಪರಿಸರವನ್ನು ಪ್ರೀತಿಸಿ ಪೂಜಿಸುವ ವೈಜ್ಞಾನಿಕ ಬದ್ಧತೆಯನ್ನು ನಮ್ಮ ಪೂರ್ವಜರು ಈ ಹಬ್ಬ ಆಚರಿಸುವ ಮೂಲಕ ಅರಿತುಕೊಂಡಿದ್ದರು‌ ತಿಳಿಸಿದರು.

ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಪುರಾತನ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ನಾಗಪಂಚಮಿ ಅಂಗವಾಗಿ ನಾಗದೇವರಿಗೆ ಹಾಲು ಎರೆದು ಪೂಜೆ ಮಾಡಿದ ವೇಳೆ ಮಾತನಾಡಿದರು.

ಇಂದು ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯ ಮನೋಭಾವನೆಗಳನ್ನು ತೊಡೆದುಹಾಕಿ ಭಾರತೀಯರು ನಾವೆಲ್ಲರೂ ಒಂದೆ ಎಂಬ ವಿಶ್ವಕುಟುಂಬ ಭಾವವನ್ನು ನಮ್ಮ ಹಬ್ಬಗಳು ಪ್ರಚುರಪಡಿಸುತ್ತಿವೆ ಎಂದರು.

ಈ ವೇಳೆ ಗಂಗಮ್ಮ, ಸಚಿನ್, ಸುಷ್ಮಾ, ಚರಣ್, ಹಾಗೂ ಭಕ್ತಾದಿಗಳು ಒಟ್ಟುಗೂಡಿ ನಾಗರಪಂಚಮಿಯನ್ನು  ವಿಜೃಂಭಣೆಯಿಂದ ಆಚರಿಸಿದರು.