ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ಯುವಕನ ಕೊಲೆಯಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಬ್ಬರು ಸಾವಿಗೀಡಾಗಿದ್ದಾರೆ. ಒಂದು ಕೊಲೆ, ಎರಡು ಎನ್ನುವಂತಾಗಿದೆ ಪ್ರಕರಣ.
ನಿನ್ನೆ ನಡೆದಿದ್ದ ಯುವಕನ ಕೊಲೆ ಪ್ರಕರಣದಲ್ಲಿ ತಂದೆ – ಮಗ ಆರೋಪಿಯಾಗಿದ್ದ ಕಾರಣ ಮನನೊಂದು ಆರೋಪಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಆತ್ಮಹತ್ಯೆ ಸುದ್ದಿ ಕೇಳಿ ಜೈಲಿನಲ್ಲಿದ್ದ ಆರೋಪಿ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮೈಸೂರಿನ ವಿದ್ಯಾನಗರದಲ್ಲಿ ಸೋಮವಾರ ಬಾಲರಾಜ್ ಎಂಬ ಯುವಕನ ಕೊಲೆ ಆಗಿತ್ತು.
ಕೊಲೆ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.ಅವರಲ್ಲಿ ಸಾಮ್ರಾಟ್ ಮತ್ತು ತೇಜಸ್ ತಂದೆ – ಮಗ.
ಪತಿ,ಮಗ ಜೈಲು ಸೇರಿದ್ದರಿಂದ ಅವಮಾನಗೊಂಡ ಸಾಮ್ರಾಟ್ ಪತ್ನಿ ಇಂದ್ರಾಣಿ (35) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಈ ವಿಚಾರ ಜೈಲಿನಲಿದ್ದ ಅಪ್ಪ,ಮಗನಿಗೆ ಮಗನಿಗೆ ಗೊತ್ತಾಗಿದೆ.
ಈ ಆಘಾತದಿಂದ ಇಂದ್ರಾಣಿ ಪತಿ ಸಾಮ್ರಾಟ್ ಹೃದಯಾಘಾತದಿಂದ ಜೈಲಿನಲ್ಲೇ ಮೃತಪಟ್ಟಿದ್ದಾನೆ.