ಶ್ರೀರಂಗಪಟ್ಟಣ:  ಕಾವೇರಿ‌ ನದಿಗೆ ಇಳಿದು ರೈತರ ಪ್ರತಿಭಟನೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ನದಿಯಿಂದ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಸ್ನಾನ ಘಟ್ಟದ ನದಿಯಲ್ಲಿ ಭೂಮಿ ಸೇವಾ ಸಮಿತಿ ಹಾಗೂ ರೈತ ಸಂಘದವರು ಅರೆ ಬೆತ್ತಲೆಯಾಗಿ ನದಿಯಲ್ಲಿ ಇಳಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು.

ಕರ್ನಾಟಕ ಸರ್ಕಾರವು ತಮಿಳುನಾಡಿನ ಸರಕಾರಕ್ಕೆ ಮಣಿದು ನೀರನು ಹರಿಸುತ್ತಿದೆ. ಇದರಿಂದ ಕರ್ನಾಟಕದ ಜನತೆಗೆ ಅನ್ಯಾಯವಾಗುತ್ತಿದೆ. ರೈತರ  ಜೀವನ ಸಂಕಷ್ಟಕ್ಕೀಡಾಗುತ್ತಿದೆ . ಇದಕ್ಕೆ ಮಂಡ್ಯ ಜಿಲ್ಲಾ ಶಾಸಕರು ಉಸ್ತುವಾರಿ ಸಚಿವರು ಕೂಡಲೇ ಗಮನಹರಿಸಿ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಿ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಶ್ರೀರಂಗಪಟ್ಟಣ ಕ್ಷೇತ್ರದ ರೈತಪರ ಹೋರಾಟಗಾರ ನಂಜುಂಡೇಗೌಡ ಅವರು ನದಿಯಲ್ಲಿ ನಿಂತು ಒತ್ತಾಯಿಸಿದರು.