ಜಮೀನು ವಿವಾದ:ಅಣ್ಣ, ಅತ್ತಿಗೆಯನ್ನ ಕೊಂದ ಪಾಪಿ‌ ತಮ್ಮ

ಮೈಸೂರು: ಜಮೀನು ವಿವಾದ ಹಿನ್ನಲೆಯಲ್ಲಿ ಅಣ್ಣ, ಅತ್ತಿಗೆ ಇಬ್ಬರನ್ನಯ ತಮ್ಮ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬನ್ನೂರಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದ್ದು ಜೋಡಿ ಕೊಲೆ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

ಹಾವು ಕಚ್ಚಿದರೆ ಔಷಧಿ ಕೊಡುತ್ತಿದ್ದ ಶಿವಲಿಂಗೇಗೌಡ(50) ಹಾಗೂ ಪತ್ನಿ ಭಾರತಿ(45)ಕೊಲೆಯಾದ ದುರ್ದೈವಿಗಳು.

ಹನುಮಂತೇಗೌಡ (48)ಅಣ್ಣ, ಅತ್ತಿಗೆಯನ್ನ ಹತ್ಯೆ ಮಾಡಿದ ತಮ್ಮ.

ಕೆಲವು ವರ್ಷಗಳಿಂದ ಜಮೀನು ವಿಚಾರದಲ್ಲಿ ಅಣ್ಣ ತಮ್ಮನ ನಡುವೆ ಭಿನ್ನಾಭಿಪ್ರಾಯವಿತ್ತು.
ಪ್ರಕರಣ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿತ್ತು.

ಒಂದು ತಿಂಗಳ ಹಿಂದೆ ಅಣ್ಣನ ಪರವಾಗಿ ತೀರ್ಪು ಬಂದಿದೆ.ಇದರಿಂದ ದ್ವೇಷಗೊಂಡ ಹನುಮಂತೇಗೌಡ ಜಮೀನಿನ ಬಳಿ ಇದ್ದ ಅಣ್ಣ, ಅತ್ತಿಗೆಯನ್ನ ಭೀಕರವಾಗಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.

ಬನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.