ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಂದಿದ್ದವನ ಬಂಧನ

ಹಾಸನ: ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ರಮೇಶ್ ಕೊಲೆಗೀಡಾದ ವ್ಯಕ್ತಿ. ಮೆಹಬೂಬ್ ಬಂಧಿತ ಆರೋಪಿ.
ಬೆಂಗಳೂರಿನಲ್ಲಿ ಚಿನ್ನಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಲಾಕ್‍ಡೌನ್ ನಂತರ ಹೊಳೆನರಸೀಪುರಕ್ಕೆ ವಾಪಸ್ಸಾಗಿದ್ದ.
ಬಾರ್ ನಲ್ಲಿ ಮಧ್ಯ ಸೇವಿಸುವÀ ವೇಳೆ ರೌಡಿಶೀಟರ್ ಮೆಹಬೂಬ್ ಮತ್ತು ರಮೇಶ್ ನಡುವೆ ಗಲಾಟೆಯಾಗಿತ್ತು.
ಈ ಹಿನ್ನಲೆಯಲ್ಲಿ ಮೆಹಬೂಬ್ ರಮೇಶ್‍ನನ್ನು ಕೊಲೆ ಮಾಡಲು ನಿರ್ಧರಿಸಿ, ರಮೇಶ್ ರಾತ್ರಿವೇಳೆ ಮನೆ ಹೊರಗೆ ಮಲಗಿರುವುದನ್ನು ಅರಿತು ಆ. 9ರಂದು ರಾತ್ರಿ ರಮೇಶ್ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗಿದ್ದ.
ರಮೇಶ್ ಕುಡಿದಿದ್ದರ ಜೊತೆಗೆ ಸ್ಯಾನಿಟೈಸರ್ ಬಳಸಿದ್ದರಿಂದ ಸಿಗರೇಟ್ ಸೇದುವಾಗ ಬೆಂಕಿ ತಗಲಿ ಸಾವನ್ನಪ್ಪಿರಬಹುದು ಎಂದು ಭಾವಿಸಲಾಗಿತ್ತು.
ಈ ಬಗ್ಗೆ ಅನುಮಾನಗೊಂಡ ಪೆÇಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಮೆಹಬೂಬ್ ರಮೇಶನಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತಿರುವುದು ಮತ್ತು ಪ್ರಾಣ ಉಳಿಸಿಕೊಳ್ಳಲು ರಮೇಶ್ ಯತ್ನಿಸಿದ ದೃಶ್ಯ ದಾಖಲಾಗಿತ್ತು.
ಅರಸೀಕೆರೆ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಅಶೋಕ್, ಎಸ್‍ಐ ಕುಮಾರ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.