ವಿಟಿಯು ನಲ್ಲಿ ಆನ್‌ಲೈನ್ ಪದವಿ ಕೋರ್ಸ್ ಗಳು ಪ್ರಾರಂಭ: ವಿಸಿ ಡಾ. ಎಸ್. ವಿದ್ಯಾಶಂಕರ್

ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಆನ್ಲೈನ್ ಶಿಕ್ಷಣದಲ್ಲಿ ಪದವಿ ಕಾರ್ಯಕ್ರಮಗಳನ್ನು ಆರಂಭಿಸಲಿದೆ ಎಂದು ವಿಟಿಯು ವಿಸಿ ಡಾ. ಎಸ್ . ವಿದ್ಯಾಶಂಕರ್ ತಿಳಿಸಿದರು

ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ವಿಸಿಯವರು ತಿಳಿಸಿದರು.

ವಿಟಿಯು 3 ಪದವಿ ಶ್ರೇಣಿಯ ಮತ್ತು 12  ಸ್ನಾತಕೋತ್ತರ ಪದವಿ ಶ್ರೇಣಿಯ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ. ಈ ಶೈಕ್ಷಣಿಕ ಕಾರ್ಯಕ್ರಮಗಳು ಎಐಸಿಟಿಇ ಯಿಂದ ಅನುಮೋದಿಸಲ್ಪಟ್ಟಿದೆ ಹಾಗೂ ಯುಜಿಸಿ ನವದೆಹಲಿ ರಿಂದ

ಅರ್ಹತೆಯನ್ನು ಪಡೆದಿವೆ ಎಂದು ಅವರು ಹೇಳಿದರು.

ವಿಟಿಯು ಈ ಕಾರ್ಯಕ್ರಮಗಳನ್ನು ನೀಡಲು ಯುಜಿಸಿ ಇಂದ ಅರ್ಹತೆ ಪಡೆದ ರಾಜ್ಯದ ಮೊದಲ ತಾಂತ್ರಿಕ ವಿಶ್ವವಿದ್ಯಾನಿಲಯವಾಗಿದೆ ಇದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದರು.

ಆಧುನಿಕ ತಾಂತ್ರಿಕ ಯುಗದಲ್ಲಿ ಉದ್ಯಮದ ಅಗತ್ಯತೆ ಮತ್ತು ಹೊಸ ಯುಗದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ವಿಶ್ವವಿದ್ಯಾನಿಲಯವು ಎಐ, ಡೇಟಾ ಸೈನ್ಸ್, ಡೇಟಾ ಅನಾಲಿಟಿಕ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಜಿ ಡಿಪ್ಲೊಮ  ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ ಎಂದು ವಿವರಿಸಿದರು.

ಈ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳು ಪ್ರವೇಶದ ಆರಂಭದಿಂದ ಹಿಡಿದು ಪರೀಕ್ಷೆಗಳ ವರೆಗೆ ಸಂಪೂರ್ಣವಾಗಿ ಆನ್ಲೈನ್ ನಲ್ಲೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಪ್ರೊ. ವಿದ್ಯಾಶಂಕರ್ ತಿಳಿಸಿದರು.

ವಿಟಿಯು ನಲ್ಲಿ ಆನ್ಲೈನ್ ಪ್ರೋಗ್ರಾಂಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ವೆಬ್ ಸೈಟ್ ಗೆ ಭೇಟಿ ನೀಡಬಹುದು.

 https://onlinedegree.vtu.ac.in ನಲ್ಲಿ ದಾಖಲಾತಿಗಳನ್ನು ಆರಂಭಿಸಲಾಗಿದ್ದು,ಸೆಪ್ಟೆಂಬರ್ 30 ರವರೆಗೂ ಅವಕಾಶ ಕಲ್ಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ವಿಟಿಯು‌ ನ ಡಾ ಟಿ. ಪಿ ರೇಣುಕಾ ಮೂರ್ತಿ, ಡಾ. ಬಿ. ಸಂಧ್ಯ,ಡಾ.ಕುಮಾರ್ ಪಿ.ಕೆ., ಪ್ರಕೃತಿ ಪಿ. ಉಪಸ್ಥಿತರಿದ್ದರು.