ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಆಂಬ್ಯುಲೆನ್ಸ್ ನಲ್ಲಿ ಬಂದ ಸರ್ವೆಯರ್!

ಮೈಸೂರು: ಅದು ಯಾವ ತುರ್ತು ಪರಿಸ್ಥಿತಿ ಇತ್ತೋ ತಿಳಿಯದು ಇಲ್ಲೊಬ್ಬರು ಸರ್ವೇಯರ್ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಅಂಬ್ಯುಲೆನ್ಸ್ ನಲ್ಲಿ ಆಗಮಿಸಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಮುಂದಾದ ಪ್ರಸಂಗ ನಡೆದಿದೆ.

ಅಚ್ಚರಿ ಅನ್ನಿಸ್ತಿದೀಯಾ ಆದರೆ ಇದು ಖಂಡಿತಾ ನಿಜ!

ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಸರ್ವೆಯರ್ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಆಂಬ್ಯುಲೆನ್ಸ್ ನಲ್ಲಿ ಬಂದಿದ್ದಾರೆ.

ಮೈಸೂರು ಮಿನಿವಿಧಾನ ಸೌಧದ ಬಳಿ‌ ಆಂಬ್ಯುಲೆನ್ಸ್ ಕಂಡು ಎಲ್ಲರಿಗೂ ಅಚ್ಚರಿ ಕಾದಿತ್ತು.

ತುರ್ತು ಚಿಕಿತ್ಸೆಯಲ್ಲಿರುವ ಸಿಬ್ಬಂದಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಅವಕಾಶ ನಿರಾಕರಿಸಿ ಹಿಂದಕ್ಕೆ ಕಳಿಸಲಾಗಿದೆ.

ಇದೀಗ ಈ ವಿಡಿಯೋ ವೈರಲ್ ಆಗಿದೆ.

ಎಮರ್ಜೆನ್ಸಿ ಚಿಕಿತ್ಸೆಯಲ್ಲಿರುವ ಸಮಯದಲ್ಲಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವಂತಹ ತುರ್ತು ಸ್ಥಿತಿ ಏನಿತ್ತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಆಂಬ್ಯುಲೆನ್ಸ್ ನಲ್ಲಿ ಬಂದವರು ಸರ್ವೆಯರ್ ದೇವರಾಜ್.

ಮಂಡ್ಯ ತಾಲೂಕು ಕಚೇರಿಯಲ್ಲಿ ಸರ್ವೆಯರ್ ಆಗಿ ಕರ್ತವ್ಯ ನಿರತವಹಿಸುತ್ತಿದ್ದ ದೇವರಾಜ್ ಅವರಿಗೆ ಮೈಸೂರು ತಾಲೂಕು ಕಚೇರಿಗೆ ವರ್ಗಾವಣೆ ಆಗಿದೆ.

ಹಾಗಾಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಇಚ್ಚಿಸಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಾಸಿಗೆ ಹಿಡಿದು ತುರ್ತು ಚಿಕಿತ್ಸೆ ಪಡೆಯುತ್ತಿದ್ದರೂ ಲೆಕ್ಕಿಸದೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಮೈಸೂರು ತಾಲೂಕು ಕಚೇರಿಗೆ ಆಂಬ್ಯುಲೆನ್ಸ್ ನಲ್ಲೇ ಆಗಮಿಸಿದ್ದಾರೆ.

ದೇವರಾಜ್ ಅವರು ಚಿಕಿತ್ಸೆ ಪಡೆಯುವ ವೇಳೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲೇ ಬೇಕಾದಂತಹ ಕಾರಣ ಏನು ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಆಸ್ಪತ್ರೆ ಅಧಿಕಾರಿಗಳು ಈ ಸಾಹಸಕ್ಕೆ ಅನುಮತಿ ನೀಡದ್ದು ಯಾಕೆ,
ಅನಾರೋಗ್ಯದಲ್ಲಿರುವ ಸಿಬ್ಬಂದಿಯನ್ನ ರಿಲೀವ್ ಮಾಡಿದ ಕಾರಣವೇನು ಎಂಬ ಪ್ರಶ್ನೆಗಳು ಜನರನ್ನು ಕಾಡುತ್ತಿವೆ.

ಸರ್ಕಾರಿ ಉದ್ಯೋಗಿಗಳ ಸ್ಥಿತಿ ಇಷ್ಟು ಕಠಿಣವೆ ಎಂದು ಕೇಳುತ್ತಿದ್ದಾರೆ ಇದಕ್ಕೆ ಉತ್ತರ ಕೊಡುವವರು ಯಾರು

ಸಧ್ಯ ಎ.ಡಿ.ಎಲ್.ಆರ್.ಚಿಕ್ಕಣ್ಣ ಹಾಗೂ ಸರ್ವೆ ಸೂಪರಿಡೆಂಟ್ ಸಿದ್ದಯ್ಯ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ.

ಹಾಗಾಗಿ ಸರ್ವೆಯರ್ ದೇವರಾಜ್ ಹಿಂದಿರುಗಿದ್ದಾರೆ.ತುರ್ತಾಗಿ ಆಂಬ್ಯುಲೆನ್ಸ್ ನಲ್ಲಿ ಬಂದುದು ಏಕೆಂಬ ಪ್ರಶ್ನೆಗೆ ದೇವರಾಜ್ ಉತ್ತರ ನೀಡಬೇಕಿದೆ