ಮೈಸೂರು: ಕಲಿಯುಗದ ಕಷ್ಟ ಕೋಟಲೆಗಳಿಂದ ಹೊರಬರಲು ವಿಷ್ಣು ಸಹಸ್ರನಾಮ ಪಾರಾಯಣ ಮೊದಲನೇ ಹಂತ ಎಂದು ಅವಧೂತ ದತ್ತಪೀಠಾಧ್ಯಕ್ಷರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ಅವಧೂತ್ತ ದತ್ತಪೀಠದ ನಾದ ಮಂಟಪದಲ್ಲಿ ಭಾನುವಾರ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ ಸಮಿತಿ ಹಮ್ಮಿಕೊಂಡಿದ್ದ 20 ಕೋಟಿ ವಿಷ್ಣು ಸಹಸ್ರನಾಮ ಸಮರ್ಪಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.
ವಿಷ್ಣು ಸಹಸ್ರನಾಮದಷ್ಟೇ ಭಗವದ್ಗೀತೆ ಪಾರಾಯಣದಿಂದಲೂ ಕೂಡ ನಮ್ಮ ಮನಸ್ಸಿನ ದುಗುಡ ಹಾಗೂ ಕಷ್ಟಕಾರ್ಪಣ್ಯಗಳನ್ನು ತಡೆದು ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಷ್ಣು ಸಹಸ್ರ ನಾಮ ಪಾರಾಯಣ ಅದ್ಭುತವಾದದ್ದು ಅದನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.
ಶಾಸಕ ಶ್ರೀವತ್ಸ ಮಾತನಾಡಿ ವಿಷ್ಣು ಸಹಸ್ರನಾಮ ಪಾರಾಯಣದಿಂದ ಮನೆ ಮನದಲ್ಲಿ ವಿಷ್ಣು ನೆಲೆಸುತ್ತಾನೆ ಎಂದು ಅಭಿಪ್ರಾಯಪಟ್ಟರು.
ವಿಷ್ಣು ಸಹಸ್ರನಾಮವನ್ನು ಜೋರಾಗಿ ಪಠಿಸಲೇಬೇಕೆಂದೇನಿಲ್ಲ ಮನದಲ್ಲೇ ಪಾರಾಯಣ ಮಾಡಿದರೂ ಕೂಡ ವಿಷ್ಣು ಮನದಲ್ಲಿ ನೆಲೆಸುತ್ತಾನೆ ಎಂದರು.
ಅದೇ ರೀತಿ ಆದಿತ್ಯ ಹೃದಯ ಸ್ತೋತ್ರ ಪಠಿಸಿದರೂ ನಮ್ಮ ಎಲ್ಲಾ ಅಡೆತಡೆ ಗೊಂದಲ ನಿವಾರಣೆಯಾಗುತ್ತದೆ ಪ್ರತಿನಿತ್ಯ ಆದಿತ್ಯ ಹೃದಯ ಪಾರಾಯಣ ಮಾಡಿದರೆ ಎಲ್ಲ ತಡೆಗೋಡೆ ನಿವಾರಣೆಯಾಗುತ್ತದೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ನಗರ ಹಾಗು ಜಿಲ್ಲಾ ಬ್ರಾಹ್ಮಣ ಅಧ್ಯಕ್ಷ ಡಿ. ಟಿ ಪ್ರಕಾಶ್ ವಹಿಸಿದ್ದರು.
ಆಧ್ಯಾತ್ಮಿಕ ಚಿಂತಕರಾದ ವಿದ್ಯಾವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರತಿ, ಡಾ. ಮುಕುಂದನ್ ಹಾಗೂ ವೆಂಗಿಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಆಧ್ಯಾತ್ಮಿಕ ಚಿಂತಕರಾದ ಡಾ. ನಾಗಲಕ್ಷ್ಮಿ ಚಂದ್ರಶೇಖರ್, ಬ್ರಾಹ್ಮಣ ತಾಲೂಕು ಸಂಘದ ಅಧ್ಯಕ್ಷ ಗೋಪಾಲರಾವ್, ವಿಪ್ರ ಮಹಿಳಾ ಸಂಗಮ ಅಧ್ಯಕ್ಷರಾದ ಡಾ. ಲಕ್ಷ್ಮಿ, ಹರೀಶ್, ಸುಚೇಂದ್ರ, ಜ್ಯೋತಿ, ಲತಾ ಬಾಲಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.