ಮೈಸೂರು: ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ, ಸಂಗ್ರಹ ವಿರುದ್ದ ಮೈಸೂರು ನಗರ ಪೆÇಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿದರು.
ಮಾದಕ ವಸ್ತುಗಳ ಮಾರಾಟವಾಗುವ ಅನುಮಾನವಿರುವ ಸ್ಥಳಗಳು ಹಾಗೂ ಈ ಹಿಂದೆ ಗಾಂಜಾ, ಮಾದಕ ವಸ್ತುಗಳನ್ನು ಮಾರಾಟ ಮಾಡಿ ದಸ್ತಗಿರಿಯಾಗಿರುವ ವೃತ್ತಿಪರ ಆರೋಪಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು.
ನಗರದ ನರಸಿಂಹರಾಜ, ಮಂಡಿ, ಉದಯಗಿರಿ ಹಾಗೂ ಆಲನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ದಾಳಿ ನಡೆಸಲಾಯಿತು.
ಯಾವುದೇ ರೀತಿಯ ಗಾಂಜಾ, ಮಾದಕ ವಸ್ತುಗಳು ದಾಳಿ ವೇಳೆ ಪೊಲೀಸರಿಗೆ ದೊರೆತಿಲ್ಲ.
ಕೆಲ ವೃತ್ತಿಪರ ಆರೋಪಿಗಳು ತಮ್ಮ ಮನೆಗಳಿಗೆ ಬೀಗ ಹಾಕಿ, ಮನೆ ಖಾಲಿ ಮಾಡಿರುವುದು ಕಂಡು ಬಂದಿದೆ.
ನಗರ ಪೆÇಲೀಸ್ ಆಯುಕ್ತರಾದ ಡಾ: ಚಂದ್ರಗುಪ್ತ ರವರ ಸೂಚನೆ ಮೇರೆಗೆ, ಡಿ.ಸಿ.ಪಿ. ಡಾ. ಎ.ಎನ್. ಪ್ರಕಾಶ್ ಗೌಡರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮರಿಯಪ್ಪರವರ ನೇತೃತ್ವದಲ್ಲಿ 90 ಮಂದಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ನಗರ ಪೆÇಲೀಸರ ವಿಶೇಷ ತಂಡ ಈ ದಾಳಿ ನಡೆಸಿದೆ.
ನಗರದ ಪೆÇಲೀಸ್ ಇನ್ಸ್‍ಪೆಕ್ಟರ್ ಗಳಾದ ಜಿ. ಶೇಖರ್, ನಾರಾಯಣಸ್ವಾಮಿ, ಮಲ್ಲೇಶ್ ಅರುಣ್, ಹೆಚ್ ಆರ್. ವಿವೇಕಾನಂದ, ವಿವೇಕಾನಂದ, ಜಗದೀಶ್ ರವರುಗಳ ವಿಶೇಷ ತಂಡ ಈ ದಾಳಿ ಕಾರ್ಯಾಚರಣೆ ನಡೆಸಿರುತ್ತಾರೆ.
ಗಾಂಜಾ ಮತ್ತು ಇತರೇ ಮಾದಕ ವಸ್ತುಗಳ ಮಾರಾಟ, ಸಂಗ್ರಹ ಮತ್ತು ಸಾಗಾಣೆ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೆÇಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 100, 2418339ಕ್ಕೆ ಮಾಹಿತಿ ನೀಡುವ ಮೂಲಕ ಈ ಕಾರ್ಯದಲ್ಲಿ ಪೆÇಲೀಸರೊಂದಿಗೆ ಕೈಜೋಡಿಸಬೇಕೆಂದು ನಗರದ ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.