ಕಾವೇರಿ ವಿವಾದ:ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಕ್ತಾರ ಟೀಕಾ ಪ್ರಹಾರ

ಮೈಸೂರು: ಕಾವೇರಿ ವಿವಾದ ವಿಚಾರಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರತಿಕ್ರಿಯಿಸಿದ್ದು,

ಕಾವೇರಿ ಮಾನಿಟರಿಂಗ್ ಬೋರ್ಡ್ ಪ್ರಾಧಿಕಾರ ರಚನೆ ಮಾಡಿದ್ದು ಮೋದಿ ಅವರು  ಎಂದು ಹೇಳಿದ್ದಾರೆ.

ಈ ಬೋರ್ಡ್ ಗೆ ಕೇಂದ್ರ ಸರ್ಕಾರದ ಚೀಫ್ ಇಂಜಿನಿಯರ್ ಮುಖ್ಯಸ್ಥರು.ಎಲ್ಲಾ ರಾಜ್ಯದ ಇಂಜಿನಿಯರ್ ಅಲ್ಲಿ ಇರುತ್ತಾರೆ.ಅಲ್ಲಿ ನಿರ್ಧಾರ ಮಾಡುವವರು ನೀವೆ. ನೀರು ಕೊಡಿ ಅಂತಾ ಹೇಳಿದವರು ನೀವೆ ನೀರು ಇದ್ದರೆ ತಾನೇ ಕೊಡುವುದು ಎಂದು ಪ್ರಶ್ನಿಸಿದರು.

ಇಲ್ಲಿ ಬಂದು ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಿಲ್ಲ.ಈಗ ಬಂದು ಬಾಯಿ ಬಡಿದುಕೊಳ್ಳುತ್ತಿದ್ದೀರಾ.ಈ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಅವರ ಕೆಲಸ ಮೆಚ್ಚಬೇಕು ಎಂದು ಹೇಳಿದರು.

ನಮಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರ ಜೊತೆಗೆ ಕೃಷಿಗೂ ನೀರು ಬೇಕು.ನಿಮ್ಮ ಯೋಗ್ಯತೆಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಅದರಲ್ಲಿ ನೀರು ಶೇಖರಣೆಯಾಗಿದ್ದರೆ ಈಗ ಅನುಕೂಲವಾಗುತಿತ್ತು.

ಇದನ್ನೆಲ್ಲಾ 25 ಸಂಸದರು ಮಾಡಬೇಕಿತ್ತು ಎಲ್ಲಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಇಂಡಿಯಾ ದಿನೇ ದಿನೇ ಎಲ್ಲರಿಗೂ ಇಷ್ಟವಾಗುತ್ತಿದೆ. ಅದಕ್ಕಾಗಿ ಒಂದೇ‌ ದೇಶ ಒಂದೇ ಚುನಾವಣೆ ಅನ್ನುತ್ತಿದ್ದೀರಾ.

ಇದೊಂದು ಕೇಂದ್ರದ ಕುತಂತ್ರ.

ಬಿಜೆಪಿ ಅಣ್ಣಾಮಲೈ ಮೂಲಕ ಪತ್ರ ಬರೆಸುತ್ತಾರೆ.ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಾರೆ.ನೀರು ಬಿಡುವ ಕೀಲಿದೆಹಲಿಯಲ್ಲಿದೆ. ಅಲ್ಲಿ ಕುಳಿತುಕೊಂಡು ಬಟನ್ ಒತ್ತಿದರೆ ಸಾಕು ನೀರು ಹೋಗುತ್ತದೆ ಎಂದು ಲಕ್ಷ್ಮಣ್ ಟೀಕಿಸಿದರು.