ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವ ಕಳೆಗಟ್ಟಿದ್ದು ಗಜಪಡೆಗೆ ಭವ್ಯ ಸ್ವಾಗತ ನೀಡಲಾಯಿತು.
ದಸರಾ ಮಹೋತ್ಸವದ ಕೇಂದ್ರ ಬಿಂದು ಗಜಪಡೆ ಮಂಗಳವಾರ ಅರಮನೆ ಪ್ರವೇಶಿಸಿತು.
ಅರಣ್ಯ ಭವನದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಗಜಪಡೆಗೆ ಕಬ್ಬು,ಬೆಲ್ಲ,ಫಲ ತಾಂಬೂಲ ನೀಡಿ,
ಆನಂತರ ಗಜಪಡೆಯನ್ನು ಬೀಳ್ಕೊಟ್ಟರು.
ಅರಣ್ಯ ಭವನದಿಂದ ಅರಮನೆಗೆ ಆನೆಗಳು ಆಗಮಿಸುವಾಗ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಕಾದು ಕುಳಿತು ವೀಕ್ಷಿಸಿದರು.
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆನೆಗಳಿಗೆ ಅಪರಾಹ್ನ 12.01ರಿಂದ 12.51ರ ಅಭಿಜಿತ್ ಲಗ್ನದಲ್ಲಿ ಸಾಂಪ್ರಾದಾಯಿಕವಾಗಿ ಪೊಜೆ ಸಲ್ಲಿಸಿ ಬರಮಾಡಿ ಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ,ಮೇಯರ್ ಶಿವಕುಮಾರ್, ಉಪಮೇಯರ್ ರೂಪಾ,ಜಿಲ್ಲಾಧಿಕಾರಿ ಡಾ.ರಾಜೇಂದ್ರ, ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೂತ್,ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಮತ್ತಿತರ ಗಣ್ಯರು ಹಾಜರಿದ್ದರು.