ಚಾಮರಾಜನಗರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ಸ್ ಪೆರೇಡ್

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರ
ಪ್ರಾಪರ್ಟಿ ರಿಟರ್ನ್ಸ್ ಪೆರೆಡ್ ವರಿಷ್ಟಾಧಿಕಾರಿ ಪದ್ಮಿನಿ ಸಾಹೊ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ2023 ನೇ ಸಾಲಿನಲ್ಲಿ 31-08-2023 ಕ್ಕೆ ಅಂತ್ಯಗೊಂಡಂತೆ ಸ್ವತ್ತು ಕಳವು ಪ್ರಕರಣಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಪ್ರಯತ್ನದಿಂದ ಒಟ್ಟು 44 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಎಸ್ಪಿ
ಪದ್ಮಿನಿ ಸಾಹೊ ಎಂದು ಸುದ್ದಿಘೊಷ್ಠಿಯಲ್ಲಿ ತಿಳಿಸಿದರು.

ಒಟ್ಟು 1,34,46,261ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಮಂಗಳವಾರ 44 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 1,34,46,761 ರೂ ಮೌಲ್ಯದ ಸ್ವತ್ತುಗಳನ್ನು ಪ್ರದರ್ಶಿಸಲಾಯಿತಲ್ಲದೆ ಕೆಲ ವಾರಸುದಾರರಿಗೆ ಮರಳಿ ನೀಡಲಾಯಿತು.

ಬೆಳ್ಳಿ ಚಿನ್ನದ ಆಭರಣಗಳ ೨೦ ಪ್ರಕರಣದಲ್ಲಿ ೧.೯೫೭.೫ ಗ್ರಾಂ ಚಿನ್ನದ ಮೌಲ್ಯ ೧,೦೫,೭೦,೫೦೦ ಮೌಲ್ಯವುಳ್ಳ ಹಾಗೂ , ೫, ೬೧೮ ಗ್ರಾಂ ಬೆಳ್ಳಿ ೩,೯೩,೨೬೦ ಮೌಲ್ಯದ್ದಾಗಿದೆ ಎಂದು ವಿವರಿಸಿದರು.

೯ ಮೊಟರ್ ಸೈಕಲ್ ಪ್ರಕರಣದಲ್ಲಿ ೩,೨೦ ಲಕ್ಷ ಹಾಗೂ ೨ ಮೊಟರ್ ವಾಹನಗಳು ೭,೬೫,೦೦೦ ನಗದು ಹಣ ೪ ಕಳುವು ಪ್ರಕರಣದಲ್ಲಿ ೧೦,೨೦,೫೦೧ ರೂಪಾಯಿಗಳು, ಇತರೆ ೯ ಇತರೆ ವಸ್ತುಗಳು ಬ್ಯಾಟರಿ, ಎಲೆಕ್ಟಿಕಲ್ ವಸ್ತುಗಳು, ತಾಮ್ರ ಮತ್ತು ಕಂಚಿನ
ಪ್ತಕರಣಗಳ ಪೈಕಿ ೩,೭೭,೦೦೦ ರೂ ಮೌಲ್ಯದ್ದಾಗಿದ್ದು ಒಟ್ಟು ೪೪ ಪ್ರಕರಣಗಳಲ್ಲಿ ೧,೩೪,೪೬,೨೬೧ ಸ್ವತ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಘೊಷ್ಟಿಯಲ್ಲಿ ಎಎಸ್ಪಿ ಉದೇಶ್ ಹಾಜರಿದ್ದರು.