ತೂಕದಲ್ಲೂ ಅಭಿಮನ್ಯು ಕ್ಯಾಪ್ಟನ್

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ತೂಕ ಪರೀಕ್ಷೆ ನಡೆಸಲಾಯಿತು.

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಬುಧವಾರ‌ ಮೊದಲ ಹಂತದಲ್ಲಿ 8ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು.

ಪೊಲೀಸ್ ಬಿಗಿ ಭದ್ರತೆಯಲ್ಲಿ ಗಜಪಡೆ ಕರೆತರಲಾಯಿತು.

ತೂಕದಲ್ಲೂ ಕ್ಯಾಪ್ಟನ್ ಅಭಿಮನ್ಯುವೇ ಮೊದಲು.ಆತ ಬಲಶಾಲಿ ಎಂಬುದು ಈಗಲೂ ಸಾಬೀತಾಯಿತು.

ದಸರಾ ಗಜಪಡೆಯ ತೂಕದ ವಿವರ ಅಭಿಮನ್ಯು – 5,160 ಕೆಜಿ.
ಗೋಪಿ – 5,080 ಕೆಜಿ
ಧನಂಜಯ – 4,940 ಕೆಜಿ
ಮಹೇಂದ್ರ – 4,530 ಕೆಜಿ
ಭೀಮ – 4,370 ಕೆಜಿ
ಕಂಜನ್- 4240 ಕೆಜಿ
ವರಲಕ್ಷ್ಮಿ – 3,020 ಕೆಜಿ
ವಿಜಯ – 2,830 ಕೆಜಿ. ತೂಕ ಹೊಂದಿವೆ.