ಮೈಸೂರು: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೆಆರ್ ಪೊಲೀಸ್ ಠಾಣೆ ಆವರಣದಲ್ಲಿ ಠಾಣೆಯ ಸಿಬ್ಬಂದಿ ಜತೆಗೂಡಿ
ಶ್ರೀ ಕೃಷ್ಣನಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕೃಷ್ಣರಾಜ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ನಾಗೇಗೌಡ ಅವರು, ಪ್ರತಿ ವರ್ಷ ಠಾಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾ ಬಂದಿದ್ದೇವೆ ಅದೇ ರೀತಿ ಈ ವರ್ಷವೂ ಸ್ಥಳೀಯರ ಜೊತೆ ಸೇರಿ ಸರಳವಾಗಿ ಠಾಣೆಯಲ್ಲಿ ಆಚರಿಸಿದ್ದೇವೆ ಎಂದು ಹೇಳಿದರು.
ಸತ್ಯ, ನ್ಯಾಯಕ್ಕಾಗಿ ಹೋರಾಟ ನಡೆಸಿದ ಶ್ರೀಕೃಷ್ಣ.ಸಮಾಜದಲ್ಲಿ ಇಂದಿಗೂ ಕಂಸ, ದುರ್ಯೋಧನರು ಇದ್ದಾರೆ, ಅಂತಹ ಶಕ್ತಿಯ ನಾಶಕ್ಕೆ ಪ್ರಯತ್ನ ಮಾಡುವತ್ತ ಶ್ರೀಕೃಷ್ಣನ ದಿವ್ಯ ಸಂದೇಶ ಅನುಸರಿಸಿ
ಚಿಂತನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಶ್ರೀಕೃಷ್ಣ ಪರಮಾತ್ಮ ಲೋಕಪ್ರಿಯ ದೇವರು. ತುಳಸಿಯ ಒಂದು ಎಲೆ ಅರ್ಪಿಸಿದರೂ ನಮ್ಮೆಲ್ಲರನ್ನು ರಕ್ಷಿಸುತ್ತಾನೆ,
ಶ್ರೀಕೃಷ್ಣನ ದಿವ್ಯ ಸಂದೇಶ ಬಾಳಿನಲ್ಲಿ ಅನುಸರಿಸಿದರೆ ವಿಶ್ವವೇ ನಂದನವನವಾಗಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.
ಸಮಾಜದಲ್ಲಿ ಅಂತಃಕಲಹಗಳನ್ನು ತೊಡೆದುಹಾಕಲು ಶ್ರೀಕೃಷ್ಣನ ಸಂದೇಶಗಳು ನೆರವಾಗುತ್ತದೆ. ಉತ್ತಮ ಸಮಾಜ ನಿರ್ಮಾಣದ ಕೆಲಸಗಳು ಕೃಷ್ಣನ ಅನುಗ್ರಹದಿಂದ ಸಾಧ್ಯವಿದೆ ಎಂದು ನಾಗೇಗೌಡ ತಿಳಿಸಿದರು.
ನೂರಾರು ದೇಶಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವ ಮೂಲಕ ಜಗತ್ತಿನ ನಾಯಕ ಶ್ರೀ ಕೃಷ್ಣ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಸ್ವಂತಕ್ಕೆ ಏನೂ ಬಯಸದೆ ಸಮಾಜಕ್ಕಾಗಿ ಬದುಕಿ, ಎಲ್ಲಾ ರೀತಿಯ ಶಕ್ತಿಯನ್ನು ನೀಡಿದವ ಶ್ರೀ ಕೃಷ್ಣ. ಗೋವಿನ ಜೀವನ ಆದರ್ಶ ಎಲ್ಲರಿಗೂ ಮಾದರಿ ಎಂದು ನುಡಿದರು.
ಸಬ್ ಇನ್ಸ್ಪೆಕ್ಟರ್ ಹರೀಶ್, ಮಂಜು, ಠಾಣೆಯ ಸಿಬ್ಬಂದಿಗಳಾದ ವಿಷಕಂಠ, ವಸಂತ್, ಜೈ ಕೃಷ್ಣ, ಚಂದ್ರು ನಾಯಕ್, ರಮೇಶ್, ಮೇಘ, ನಂದಿನಿ, ಅರ್ಪಿತ, ಹಾಗೂ ಸ್ಥಳೀಯ ಮುಖಂಡರಾದ ನಜರ್ಬಾದ್ ನಟರಾಜ್, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಜಿ ರಾಘವೇಂದ್ರ, ಹೊಯ್ಸಳ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ರಾಜೇಶ್, ಸುರೇಶ್ ಗೋಲ್ಡ್, ಪವನ್ ಸಿದ್ದರಾಮು, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.